Posts

Showing posts from May, 2021

ನಾ ಯಾಕ ಬುದ್ಧನ ಓದಲಿಲ್ಲ?

Image
ಬುದ್ಧ ಅಕ್ಷರಗಳಲ್ಲಿ ಹುದಗಿದ್ದನಾ? ಇಲ್ಲ, ಇಲ್ಲೆ ನಮ್ಮ ಮನೆಗಳಲ್ಲಿ “ಶಾಂತ ಮೂರುತಿ”ಯಾಗಿ, ಹಳದಿ ಅರಬಿ ತೊಟಕೊಂಡು, ಗುಂಗುರಗೂದಲ ಇಟಕೊಂಡು, ಕಣ್ಣ ಮುಚ್ಟಿ ತಪ ಮಾಡುವ ಶಿಲೆಯಾಗಿ, ಸ್ತಬ್ಧವಾಗಿ ಬಿಟ್ಟನಾ?   ಅರಿವಿನ ವ್ಯಾಪ್ತಿ ವಿಸ್ತಾರ ಮಾಡಲು ಹೊರಟಂವ, ಸಾವಿಲ್ಲದ ಮನಿಯ ಸಾಸಿವೆ ಕಾಳ ತಗೊಂಡು ಬಾ ತಾಯಿ ಅಂದನಲ್ಲ? ಸಾವಿನ ಹೆದರಿಕೆ ಕಳೆಯಬೇಕೆಂಬ ಗುರಿಯಯಿತ್ತೆ? ಬುದ್ಧ ಜನಮಾನಸಸದಲ್ಲಿ, ಕಳಿದಿದ್ದೆಷ್ಟು? ಕೂಡಿಸಸಿದ್ದೆಷ್ಟು? ಈ ಗಣಿತದ ಮ್ಯಾಲ ನಾವು ಲೆಕ್ಕ ಹಾಕಿದರ, ಸಾವು ನೋವಿನ ಕಾರಣಗಳನ್ನೆ ನಮಗ ತಿಳಿಸಿದ ಮಾರ್ಗದರ್ಶಕನಾಗಿ, ತಾನು ನಡೆದು ಹೋದನೆ?   ಇಲ್ಲಾ ಬುದ್ಧ ನಮ್ಮೊಳಗೆ ಮಿಳಿತವಾಗಿ, ಸಮ ಸಮಾಜಕ್ಕ ಹಾತೊರೆಯುವ ಮನಗಳಿಗೆ, ಸುಪ್ತ ಮನಸ್ಸಿನಲ್ಲಿ ಸ್ಥೂಪವಾಗಿ ನೆಲೆಯೂರಿದನೆ? ನೆಲೆ ಉರುವ ಮನಸ್ತಿಥಿಯಯವನೆ? ಅಂತರಾಳದ ನದಿಯಾಗಿ ಹರಿಯುವವನನೆ? ಈ ಎಲ್ಲ ಪ್ರಶ್ನೆಗಳು, ಅರಿವಿನ ವ್ಯಾಪ್ತಿ ವಿಸ್ತಾರಗೊಳಸಲಕ್ಕ, ಹೆಂಟಿ ಹೊಡದು, ಹೊಲವನ್ನ ಹದಗೊಳಿಸುವ ಪ್ರಯತ್ನ. ಈಗ ನನಗ ಯಾಕ ಬುದ್ಧನ ಒದಲಕ್ಕ ಯಾಕಾಗಲಿಲ್ಲ ಅನ್ನುವ ಪ್ರಶ್ನೆಯ ಉತ್ತರಗಳ ಹುಡಕಾಟದಲ್ಲಿ, ನನ್ನೊಳಗೆ ಬುದ್ಧ ನಿತ್ಯ ಹರಿಯುವ ನದಿಯೆ? ಅನ್ನುವ ಧನ್ಯದ ಭಾವ ಮೂಡಲಾರದೆ ಇಲ್ಲ, ಅದನ್ನ ಕಡಿಕ್ಕ ಹೇಳತಿನಿ.   ಹುಟ್ಟಿದ್ದು ಕಲಬುರಗಿಯಲ್ಲಿ, ಬೆಳೆದಿದ್ದು ಬಿಜಾಪೂರ, ಮಂಗಳೂರ ಮತ್ತು ಬೆಂಗಳೂರ ಜಿಲ್ಲೆಗಳಲ್ಲಿ, ಒದಿದ್ದು, ಕನ್ನಡ ಮಾದ್ಯಮದಲ್ಲಿ, ...