Posts

Showing posts from June, 2023

ಮಾನನೀಯ ಮುಖ್ಯಮಂತ್ರಿಗಳಿಗೆ ಅಂತರಂಗದ ಪತ್ರ!

 ಮಾನನೀಯ ಮುಖ್ಯಮಂತ್ರಿ ಶರಣ ಸಿದ್ದರಾಮಯ್ಯನವರ ಮತ್ತು ಮಾನನೀಯ ಶಿಕ್ಷಣ ಸಚಿವರ ಗಮನಕ್ಕೆ, ಬಹಿರಂಗ ಒತ್ತಾಸೆ. ಹಿರಿಯರೆ, ಮತ್ತು ಬಸವಾನುಯಾಯಿಗಳು ಪ್ರಜಾಸತ್ಮಕ ಒಲುವು ಇರುವ ನಿಮಗೆ ಒಬ್ಬ ಕನ್ನಡಿಗನ ಸವಿಹಾರೈಕೆ ಮತ್ತು ನಿವೇದನೆ, ಶರಣರೆ ನಾನು “ಕನ್ನಡ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಕೊಂಡಗೂಳಿಯ ೧೯೮೭-೧೯೯೫ ರ ವಿಧ್ಯಾರ್ಥಿ, ಈ ಶಾಲೆಗೆ ನಾನು  ಉತ್ತರದಲ್ಲಿ ಉದಯಿಸಿದ ಸೂರ್ಯ ಅಂತೀನಿ (ಕವನ ಲಗತ್ತಿಸಲಾಗಿದೆ - ಸೊಲಗಿ ಹಿಟ್ಟ ಚೆರಗಿ ಮಜ್ಜಗಿ). ನಾನು ಮತ್ತ ನನ್ನ ಸಹಪಾಠಿಗಳು ಬಡತನ ಮತ್ತು ಅಸ್ಪೂರ್ಷತೆ  ಅರಿವು ಇರಲಾರದೆ, ಶಿಕ್ಷಣವೆ ನಾವಿರುವ ಪರಸ್ಥಿತಿಯಿಂದ ಹೊರತರುವ ಸಾಧನ ಅಂತ ನಂಬಿದ ಸಾಮನ್ಯ ಕೊಂಡಗೂಳಿಯವರ ಮಕ್ಕಳು! ಅದು ವಾಸ್ತವದಲ್ಲಿ (೨೦೨೩ರಲ್ಲಿ) ಸತ್ಯ! ಏಳು ಮಂದಿಯ ಉಧಾಹರಣೆ ಕೊಟ್ಟು ನಿರೂಪಿಸ್ತಿನಿ, ಮೊದಲಯನೆವಾಗಿ ನಾನು ಈಗ ನರ್ಸಿಂಗ ಕಾಯಕದಲ್ಲಿ ನಿರತವಾಗಿರುವ ಇಂಗ್ಲೆಂಡಿನಲ್ಲಿರುವ ಮೊದಲ ಕೊಂಡಗೂಳಿಯಂವ, ನಂತರ ಇನ್ನೊಬ್ಬ ಸಹಪಾಠಿ ಕೃಷಿ ಇಲಾಖೆಯಲ್ಲಿ, ತಾಲುಕಾ ಅಧಿಕಾರಿ, ಮತ್ತೊಬ್ಬ ಪೋಲಿಸ ಇಲಾಖೆಯಲ್ಲಿ ASI, ಇನ್ನೊಬ್ಬ ಹಿಂದಿ ನುಡಿಯ ಶಿಕ್ಷಕ, ಮಗದೋಬ್ಬ PhD (ಮಾಡಿದಾನೆ ಅಂತ ಕೇಳಿನಿ ಸ್ಪಷ್ಟೆತೆ ಇಲ್ಲ ಅದನ್ನ ಮಾಹಿತಿ ಸಿಕ್ಕಾಗ ಹಂಚಿಕೊಳ್ಳುವೆ) ಒಬ್ಬ ರಾಜ್ಯ ಸಾರಿಗೆಯ ಸೇವೆಯಲ್ಲಿ, ಒಬ್ಬ ವ್ಯಾಪಾರಿ (ಶಾಲೆಯಲ್ಲಿ ಸ್ಥಾಪಿಸಿದ ಸಹಕಾರ ಸಂಸ್ಥೆಯ ಅನುಭವ ಇದ್ದಂವ), ಒಬ್ಬ ತೀರಿದ, ಒಬ್ಬ ಖಾಸಗಿ ವ್ಯವಹಾರದಲ...