Posts

ಜಗತ್ತಿಗೊಂದು ಶಾಂತಿ ಮಂತ್ರ: ಕುವೆಂಪು-ಬಸವಣ್ಣನವರ ಹಾದಿ ನಮಗೆ ದಾರಿ

Image
ಭಾರತದಾಗ ಬಹುತೇಕ ಮಂದಿ ಇವತ್ತು ಒಬ್ಬ ಪ್ರೀತಿಯ ನಾಯಕನ ಅಗಲಿಕೆಯ ದುಃಖದಾಗ ಅದಾರ. ಆದರೆ ಇಂತಾ ಟೈಮ್‌ನ್ಯಾಗೂ ಕೆಲವ್ರು ಮುಸ್ಲಿಂ ಸಮಾಜದವರನ್ನ "ಅನ್ಯರು" ಅಂತಾ ಅನ್ನೋದು, ಅವರನ್ನು ಗೇಲಿ ಮಾಡೋದು, ಅಷ್ಟಕ್ಕ ನಿಲ್ಲದ ಅವರನ್ನು ಬರಿ ಒಂದು "ಪಾರ್ಟಿ"ಗೆ ಸೀಮಿತ ಮಾಡೋದು ನೋಡಿದ್ರ ಬಹಳ ಸಂಕಟ ಆಕ್ಕೈತಿ. ಇವತ್ತು ನಾವು ಕುವೆಂಪು ಅವ್ರ 'ವಿಶ್ವಮಾನವ' ತತ್ವ ಮತ್ತು ಬಸವಣ್ಣನವರ 'ಇವ ನಮ್ಮವ' ಅನ್ನೋ ದೊಡ್ಡ ಗುಣವನ್ನ ಮತ್ತೊಮ್ಮೆ ನೆನಪು ಮಾಡ್ಕೋಬೇಕಾಗೈತಿ. ವಿಶ್ವಮಾನವ ಅಂದ್ರ ಏನ್ರೀ? ನಮ್ಮ ಕುವೆಂಪು ಅಜ್ಜ ಹೇಳಿದ್ರು, "ಮಗು ಹುಟ್ಟುವಾಗ ವಿಶ್ವಮಾನವ ಇರ್ತೈತಿ, ಅದನ್ನ ಬೆಳೆಯುತ್ತಾ ಅಲ್ಪಮಾನವ ಮಾಡ್ತೀವಿ" ಅಂತಾ. ನಾವು ಇವತ್ತು ಜಾತಿ-ಧರ್ಮದ ಹೆಸರಿನಾಗ ಗೋಡೆ ಕಟ್ಕೊಂಡು ಕುಂತೇವಿ. ಯಾರನ್ನೋ ನೋಡಿ ನಕ್ಕರೆ ಇಲ್ಲಾ ಅವರನ್ನು ಕೀಳಾಗಿ ಕಂಡರೆ ನಮ್ಮ ಸಂಸ್ಕೃತಿ ದೊಡ್ಡದಾಗಂಗಿಲ್ಲ. ಬಸವಣ್ಣನವರು ಎಷ್ಟೋ ವರ್ಷದ ಹಿಂದ ಹೇಳ್ಯಾರ, "ಇವನಾರವ ಇವನಾರವ ಅನ್ನಬೇಡ್ರಿ, ಇವ ನಮ್ಮವ ಇವ ನಮ್ಮವ ಅನ್ರಿ" ಅಂತಾ. ಒಬ್ಬ ಮನುಷ್ಯನನ್ನು ಬರಿ ಒಂದು ವೋಟ್ ಹಾಕೋ ಮಂದಿ ಅಂತಾ ಅಂದ್ಕೊಳ್ಳೋದು ಅವರಿಗೆ ಮಾಡೋ ಅವಮಾನ ಅಲ್ಲೇನ್ರಿ? ಅಪನಂಬಿಕೆಯ ವಿಷವರ್ತುಲ: ಅಮೆರಿಕ-ಇರಾನ್ ಸಂಘರ್ಷದಿಂದ ನಾವು ಕಲಿಯಬೇಕಾದ್ದು ಜಗತ್ತಿನಾಗ ಈ ಅಮೆರಿಕ ಮತ್ತು ಇರಾನ್ ನಡುವಿನ ಜಗಳ ನೋಡಿದ್ರ ನಮಗೊಂದು ಬುದ್ಧಿ ಬರ...

The Eternal Bridge: From the 12th-Century Vachana Movement to Global Social Justice

Image
By: Basava Patil, Kondaguli. World Social Justice Day serves as a poignant reminder that the quest for equity is not a modern invention, but an ancient heartbeat. Long before the drafting of international charters, the 12th-century Sharana movement in Karnataka, led by Basavanna, pioneered a radical socio-spiritual revolution. By dismantling the hierarchies of caste, gender, and occupation through Vachanas (rhythmic prose), the Sharanas established a template for justice that mirrors the very core of the Indian Constitution and global human rights movements today. The Philosophy of Kayaka and Equality The movement's bedrock was Kayaka (divine labor) and Dasoha (selfless giving). It taught that no work is superior to another, provided it is done with integrity (Ramanujan, 1973). Here are five Vachanas from diverse backgrounds that echo this sentiment: Madivala Machideva (Washerman): "The body is the same, the breath is the same... then why the distinction of high and low?...

The Deccan Cross: A Unified Vision for Karnataka's Economic Future

Image
 By Basava Patil "M.B. Patil's irrigation projects gave Vijayapur the 'water of life. ' This new industrial corridor will give it the "veins of commerce." It is time to demand a budget that recognizes Vijayapur not just as a historical site, but as the future tri-junction of South Indian prosperity.' The message from Karnataka’s Minister for Large and Medium Industries, M.B. Patil , is crystal clear: the state is done being a passive observer in its own economic destiny. His recent, politically charged demand for a Mumbai–Bengaluru Financial Corridor , following the Union Budget 2026–27, is more than a grievance—it's a rallying cry. While the Budget’s announced high-speed rail projects for Bengaluru–Hyderabad and Bengaluru–Chennai barely graze our borders, Patil’s call to action, urging our 28 MPs to unite and proposing a "People’s Movement" with Maharashtra, hits at the core of equitable development. But as we stand with Minister Patil, pus...

ಲಿಂಗಾಯತ ಅಂದರೇನು?

ಜಾತಿ! ಅಂತ ಮಾಧ್ಯಮ ಬರಿತಾವ? ಹಂಗಂದರ ಅದು ಜಾತಿನಾ? ಜಾತಿಯಾಗಿದ್ದರೆ, ೭೭೦ ಮಂದಿ ಒಂದೆ ಜಾತಿಯಾಗಿರಬಹುದಿತ್ತಲ್ಲ? ಅದು ಬಿಡಿ ಲಿಂಗಾಯತರ ಕೋಟಾದಲ್ಲಿ ರಾಜಕೀಯ ಪಕ್ಷದ ಅಭ್ಯರ್ಥಿ ಆದವರೆಲ್ಲಾ, ಒಂದೆ ಜಾತಿಯವರೆ? ಹಾಗಿದ್ದರೆ ಆಯಾ ಜಾತಿಯ ಸಂಖ್ಯೆದಡಿಯಲ್ಲಿ ಯಾಕ ಟಿಕೇಟ ವಿತರಣೆ ಆಯಿತು? “ನಮ್ಮ ಲಿಂಗಾಯತರಿಗಿ ೨ಡಿ” ಕೊಡಿ ಅಂತ ಹೇಳಾಂವ ಎಲ್ಲಾ ಲಿಂಗಾಯತರನ್ನ ಪ್ರತಿನಿಧಿಸ್ತಾನಾ? ಹಿಂದು ನಾವೆಲ್ಲಾ ಒಂದು ಅಂತ ಹೇಳಾಂವ ತನ್ನ ಜಾತಿಗಿ ಮೀಸಲಾತಿ ಕೇಳೋದು, ದ್ವಂದ್ವ ಅಲ್ಲವಾ? ಎನ್ನ ಕರಸ್ಥಳಕ್ಕೆ ಬಂದು ಚುಳಾಕದಿರಯ್ಯ ಅಂದ ಅಣ್ಣನ ತತ್ವ ಪ್ರಚಾರ ಮಾಡತೀನಿ ಅಂತ ಹೇಳಿ, ಜಾತ್ರ್ಯಾಗ ತಿರಗಾಡಿ ರೀಲ್ಸ ಮಾಡೂದು ತಪ್ಪಲ್ಲವೆ? ಲಿಂಗಾಯತ ಅಂದರೆ ತತ್ವ! ಅದು ಜಾತೀಯ, ಮತ್ತು ಅಸ್ಪುರ್ಶತೆಯನ್ನ ಮೆಟ್ಟಿ ನಿಂತ ತತ್ವ, ಜಡತ್ವದಿಂದ ಚಿಂತನಶಿಲತೆಯೆಡೆಗೆ ಕರೆದುಕೊಂಡು ಹೋಗುವ ಮಾರ್ಗ! ಸೋಹಂ ನಿಂದ ದಾಸೋಹಕ್ಕ ಬಂದು ನಿಲ್ಲಿಸಿದ ಕಸುವ! ಲಿಂಗಾಯತ ಎಂದರೆ, ಉಪದೇಶ, ಸಂಸ್ಕೃತಿ ಮತ್ತ ಪ್ರವಾದಿ ಅನ್ನುವ ಕಾಲ್ಪನಿಕ ವ್ಯವಸ್ಥೆಯನ್ನ ನಿರಾಕರಿಸಿ, ಅನುಭಾವ, ಸಂವಾದ ಮತ್ತು ಸಾಮೂಹಿಕ ನಾಯಕತ್ವ ಕಟ್ಟಿದ/ವು ಪ್ರಜಾಸತ್ಮಾಕ ವ್ಯವಸ್ಥೆ. ಲಿಂಗಾಯತ ಅಂದರೆ, ಮೌಲ್ಯಗಳನ್ನ ಕಲ್ಲಾಗಿಸಿದ್ದಲ್ಲ, ಮನ್ವಂತರಕ್ಕೆ ಎಡೆ ಮಾಡಿದ ಸಾಧನ (tool). ಲಿಂಗಾಯತ ಅಂದರೆ, ಬಿತ್ತಿದ ಭಯವನ್ನ , ಕಿತ್ತಿ ಎಸೆಯುವ ಗಣಾಚಾರ! ಲಿಂಗಾಯತ ಅಂದರೆ, ಒಳಗೆ ಸುಳಿಯುವ ಆತ್ಮ ಹೆಣ್ಣು ಅಲ್ಲ ಗಂಡ ಅಲ್ಲ, ಅಂತ ಅನ...

ಮಾನನೀಯ ಮುಖ್ಯಮಂತ್ರಿಗಳಿಗೆ ಅಂತರಂಗದ ಪತ್ರ!

 ಮಾನನೀಯ ಮುಖ್ಯಮಂತ್ರಿ ಶರಣ ಸಿದ್ದರಾಮಯ್ಯನವರ ಮತ್ತು ಮಾನನೀಯ ಶಿಕ್ಷಣ ಸಚಿವರ ಗಮನಕ್ಕೆ, ಬಹಿರಂಗ ಒತ್ತಾಸೆ. ಹಿರಿಯರೆ, ಮತ್ತು ಬಸವಾನುಯಾಯಿಗಳು ಪ್ರಜಾಸತ್ಮಕ ಒಲುವು ಇರುವ ನಿಮಗೆ ಒಬ್ಬ ಕನ್ನಡಿಗನ ಸವಿಹಾರೈಕೆ ಮತ್ತು ನಿವೇದನೆ, ಶರಣರೆ ನಾನು “ಕನ್ನಡ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಕೊಂಡಗೂಳಿಯ ೧೯೮೭-೧೯೯೫ ರ ವಿಧ್ಯಾರ್ಥಿ, ಈ ಶಾಲೆಗೆ ನಾನು  ಉತ್ತರದಲ್ಲಿ ಉದಯಿಸಿದ ಸೂರ್ಯ ಅಂತೀನಿ (ಕವನ ಲಗತ್ತಿಸಲಾಗಿದೆ - ಸೊಲಗಿ ಹಿಟ್ಟ ಚೆರಗಿ ಮಜ್ಜಗಿ). ನಾನು ಮತ್ತ ನನ್ನ ಸಹಪಾಠಿಗಳು ಬಡತನ ಮತ್ತು ಅಸ್ಪೂರ್ಷತೆ  ಅರಿವು ಇರಲಾರದೆ, ಶಿಕ್ಷಣವೆ ನಾವಿರುವ ಪರಸ್ಥಿತಿಯಿಂದ ಹೊರತರುವ ಸಾಧನ ಅಂತ ನಂಬಿದ ಸಾಮನ್ಯ ಕೊಂಡಗೂಳಿಯವರ ಮಕ್ಕಳು! ಅದು ವಾಸ್ತವದಲ್ಲಿ (೨೦೨೩ರಲ್ಲಿ) ಸತ್ಯ! ಏಳು ಮಂದಿಯ ಉಧಾಹರಣೆ ಕೊಟ್ಟು ನಿರೂಪಿಸ್ತಿನಿ, ಮೊದಲಯನೆವಾಗಿ ನಾನು ಈಗ ನರ್ಸಿಂಗ ಕಾಯಕದಲ್ಲಿ ನಿರತವಾಗಿರುವ ಇಂಗ್ಲೆಂಡಿನಲ್ಲಿರುವ ಮೊದಲ ಕೊಂಡಗೂಳಿಯಂವ, ನಂತರ ಇನ್ನೊಬ್ಬ ಸಹಪಾಠಿ ಕೃಷಿ ಇಲಾಖೆಯಲ್ಲಿ, ತಾಲುಕಾ ಅಧಿಕಾರಿ, ಮತ್ತೊಬ್ಬ ಪೋಲಿಸ ಇಲಾಖೆಯಲ್ಲಿ ASI, ಇನ್ನೊಬ್ಬ ಹಿಂದಿ ನುಡಿಯ ಶಿಕ್ಷಕ, ಮಗದೋಬ್ಬ PhD (ಮಾಡಿದಾನೆ ಅಂತ ಕೇಳಿನಿ ಸ್ಪಷ್ಟೆತೆ ಇಲ್ಲ ಅದನ್ನ ಮಾಹಿತಿ ಸಿಕ್ಕಾಗ ಹಂಚಿಕೊಳ್ಳುವೆ) ಒಬ್ಬ ರಾಜ್ಯ ಸಾರಿಗೆಯ ಸೇವೆಯಲ್ಲಿ, ಒಬ್ಬ ವ್ಯಾಪಾರಿ (ಶಾಲೆಯಲ್ಲಿ ಸ್ಥಾಪಿಸಿದ ಸಹಕಾರ ಸಂಸ್ಥೆಯ ಅನುಭವ ಇದ್ದಂವ), ಒಬ್ಬ ತೀರಿದ, ಒಬ್ಬ ಖಾಸಗಿ ವ್ಯವಹಾರದಲ...

ಅಣ್ಣನ ಜಾತ್ರೆಯ ತೇರು ಆಗಿಸದೆ

Image
 ಒಬ್ಬ ನಾಯಕರಿಗೆ ಎಂತಹ ಪೂರಕ ವ್ಯವಸ್ತೆ ಇತ್ತು? ಮನೆತನ, ಸಂಸ್ಥೆ ಮತ್ತು ಹಲುವು ಕಾಯಕ ಪಂಗಡಗಳ ಒಕ್ಕೂಟ ಎಲ್ಲಾ ಲಿಂಗಾಯತ ಧರ್ಮದ ತಳಹದಿಯಲ್ಲಿ ಸಿಕ್ಕ ಅವಕಾಶ, ಅನುಭಾವ ಮತ್ತ ಅಸ್ಮಿತೆ, ಆ ಎಲ್ಲವನ್ನು ಅಸ್ವಾದಿಸಿ “ಗೌಡ” ಎನ್ನುವ “ವ್ಯಕ್ತಿಗತ” ತತ್ವಕ್ಕ ಒಳಗಾಗಿ ಜಂಗಮ ದಾಸೋಹ ನಿರಾಕರಿಸಿದ್ದು ಆಶ್ಚರ್ಯ ಮತ್ತು “ಭಯದ ಬುತ್ತಿ” ತಿಂದರೊ ಅದಕ್ಕ ಕಸುವು ಕಳಕೊಂಡರೊ ಅನ್ನೊ ಸಹಾನುಭೂತಿ, ಹತ್ತಾರಾಗ ಹನ್ನೊಂದು ಆಗೋದೊ, ಹನ್ನೊಂದರೋಳಗ ನಾ ಭಿನ್ನ ಅನ್ನೊ ಅಸ್ಮಿತೆ ಎತ್ತಿ ಹಿಡಿಯೋದೊ ಅರಿಯದೆ ಹೋದರಾ? ಲಿಂಗಾಯತ ಯಾರಿಗೆ ಬೇಕು ಅನ್ನೊ ಧೋರಣೆ ಲೆಕ್ಕ ಹಾಕೊ ಮಂದಿಗೆ ಗಣಿತಕ್ಕ ಹೊಳಿಯುವದಂತದ್ದಲ್ಲ ಲಿಂಗಾಯತ ತತ್ವ,  ಇದು ಎದೆಯ ದನಿ, ದಮನಿತರ ಸಂಜೀವಿನಿ, ಜಾತೀಯ ದ್ವೇಷಕ್ಕ ಸಿಕ್ಕ ಔಷದಿ! ಇದು ದೇವರಿಗೆ ಕನ್ನಡ ಕಲಿಸಿದ ಅಕ್ಷರ ಕ್ರಾಂತಿ, ಅಂಗೈಯೋಳು ಲಿಂಗ ಕೆೊಟ್ಟ ತತ್ವದ ಧಾರ್ಮೀಕ ಕ್ರಾಂತಿ, ಮಾದಾರ ಚೆನ್ಯಯ್ಯನ ಮಗನೆಂದ ಸಮಾಜೀಕ ಕ್ರಾಂತಿ, ಎಲ್ಲರಲ್ಲು ಇರುವ ಆತ್ಮ ಹೆಣ್ಣು ಅಲ್ಲ ಗಂಡು ಅಲ್ಲ ಅಂದ ಸಮಾನತೇಯ ಕ್ರಾಂತಿ, ಅಂದಿನ ಅನ್ನ ಅಷ್ಟ ಸಾಕೆಂದ ದಾಸೋಹದ ಕ್ರಾಂತಿ, ತತ್ವನ್ನ ಅರುಹಿಬಂದವರ ಎದೆಗಪ್ಪಿ ಸಲುಹಿದ ದೊಡ್ಡತನದ ಕ್ರಾಂತಿ, ಈ ಕ್ರಾಂತಿ ಹಾಡು ನಾವು ನಿತ್ಯ ಹಾಡೋಣ, ಮತ್ತೆ ಕಲ್ಯಾಣ ಕಟ್ಟೋಣ, ಮನದ ಮಡುವಿನಲ್ಲಿ ಹುದುಗಿದ ಜಾತೀಯತೆ ಅಳೇಯೊಣ ಬಸವ ಭೀಮರ ಕನಸು ನನಸಾಗಿಸೋಣ! ಜಾಗತೀಕ ಲಿಂಗಾಯತ ಮಹಾಸಭಾದ ಮನ್ವಂತರ, ಗಟ್ಟಿತನ ದಿನದಿಂದ ದ...

ಪ್ರವಾದಿ ಮಹಮ್ಮದ ಪೈಗಂಬರ

ಪ್ರವಾದಿ ಮಹಮ್ಮದ ಪೈಗಂಬರ ಅವರನ್ನ ನಾನು ಹೀಗೆ ನೆನೆಯುತ್ತೆನೆ. ದೈವೀಕ ಭಾವನೆಯನ್ನ ಐಕ್ಯತೆಗೊಳಿಸಿ ದೇವನೊಬ್ಬನೆ ಅನ್ನುವ ತತ್ವ ಪ್ರತಿಪಾದಿಸಿ, ಸಾಮೂಹಿಕ ಪ್ರಾರ್ಥನಾ (ನಮಾಜ) ವ್ಯವಸ್ಥೆ ಮಾನವೀಯ ಎತ್ತಿ ಹಿಡಿಯುವ ಆಚರಣೆ, ಬಡವ, ಬಲ್ಲಿದ, ಶ್ರೀಮಂತರ ಎಲ್ಲರೂ ಸಾಲಾಗಿ ನಿಂತು ಸೃಷ್ಟಿಕರ್ತ ದೇವನೆಡೆಗೆ ಮನ ಅರ್ಪೀಸುವ ಭಾವ! ಸ್ಪೂರ್ಥಿಯ ಆಚರಣೆ. ಜಕಾತ್ - ಸಮುದಾಯಕ್ಕ ನೀಡುವ ಕಾಣಿಕೆ (ದಾಸೋಹ ಭಾವ). ಅಲ್ಹಮದು ಅಲ್ಹಾ - ಎಲ್ಲಾ ದೇವರಿಂದ. ಇನ್ಶಾಲ್ಲಹ - ದೇವರ ಇಚ್ಛೆ . ಇಂತಹ ಯುಕ್ತಿಗಳು, ಮನುಷರನ್ನ ಶರಣರನ್ನಾಗೀಸುವ ಪ್ರಕ್ರಿಯೆ.  ಹೆಣ್ಣು ಮಕ್ಕಳಿಗೆ ಸಮಾನತೆ ಪ್ರತಿಪಾದಿಸಿದ ಪ್ರವಾದಿಗಳು, ಇಸ್ಲಾಮ ಧರ್ಮದಲ್ಲಿ ವರದಕ್ಷಿಣೆ ನಿಷಿದ್ಧ…ಹೆಣ್ಣು ಮದುವೆ ಆಗುವ ವರನನ್ನ ಪ್ರಶ್ನೆ ಕೇಳುವ ವ್ಯವಸ್ಥೆ ಕೂಡಾ ಇದೆ ( ಇದು ನನಗೆ ಹೇಳಿದ್ದು ಇರಾನೀನ ಗೆಳತಿ), ಆದರೆ ಭಾರತದಲ್ಲಿ ಜಾತೀಯ ಭಾವ ಈ ಧರ್ಮದ ಆಚರಣೆಯಲ್ಲಿ ತುಂಬಿ ಆಗಿದೆ. ಪ್ರವಾದಿಗಳು ಶಿಕ್ಷಣ ಕೊಟ್ಟವರು, ಬರಿ ಧಾರ್ಮೀಕ ಶಿಕ್ಷಣಕ್ಕೆ ಅಷ್ಟೆ ಅಲ್ಲ, ಆದರೆ ಅಲ್ಲಿ ಕೂಡಾ ಪುರೋಹಿತ ಶಾಹಿ ತುಂಬಿದೆ. ಇಸ್ಲಾಮ ಓದಿದವರಿಗೆ, ಲಿಂಗಾಯತ ಧರ್ಮ ತಿಳಿಯುವದು ಸರಳ, ಹಾಗಾಗಿ ಬಸವಣ್ಣನ ನಾಡಿನಲ್ಲಿ, ವಚನ ಸಾಹಿತ್ಯ ಅಥವಾ ಲಿಂಗಾಯತ ಧರ್ಮದ ಮೇಲೆ ದಾಳಿ ಆಗಿಲ್ಲ ಅನ್ನುವ ಐತಿಹ್ಯ ಅಲ್ಲಗಳೆಯಲು ಸಾದ್ಯವಿಲ್ಲ (ಅಲ್ ಅಮೀನ ಮೇಡಿಕಲ್ ಕಾಲೇಜ ವೈದ್ಯರು, ವಿದ್ವಾಂಸರು ಹೇಳಿದ್ದು).  ಇಸ್ಲಾಮನಲ್ಲಿ ದೇವರನ್...