ಲಿಂಗಾಯತ ಅಂದರೇನು?
ಜಾತಿ! ಅಂತ ಮಾಧ್ಯಮ ಬರಿತಾವ? ಹಂಗಂದರ ಅದು ಜಾತಿನಾ?
ಜಾತಿಯಾಗಿದ್ದರೆ, ೭೭೦ ಮಂದಿ ಒಂದೆ ಜಾತಿಯಾಗಿರಬಹುದಿತ್ತಲ್ಲ?
ಅದು ಬಿಡಿ ಲಿಂಗಾಯತರ ಕೋಟಾದಲ್ಲಿ ರಾಜಕೀಯ ಪಕ್ಷದ ಅಭ್ಯರ್ಥಿ ಆದವರೆಲ್ಲಾ, ಒಂದೆ ಜಾತಿಯವರೆ? ಹಾಗಿದ್ದರೆ ಆಯಾ ಜಾತಿಯ ಸಂಖ್ಯೆದಡಿಯಲ್ಲಿ ಯಾಕ ಟಿಕೇಟ ವಿತರಣೆ ಆಯಿತು?
“ನಮ್ಮ ಲಿಂಗಾಯತರಿಗಿ ೨ಡಿ” ಕೊಡಿ ಅಂತ ಹೇಳಾಂವ ಎಲ್ಲಾ ಲಿಂಗಾಯತರನ್ನ ಪ್ರತಿನಿಧಿಸ್ತಾನಾ? ಹಿಂದು ನಾವೆಲ್ಲಾ ಒಂದು ಅಂತ ಹೇಳಾಂವ ತನ್ನ ಜಾತಿಗಿ ಮೀಸಲಾತಿ ಕೇಳೋದು, ದ್ವಂದ್ವ ಅಲ್ಲವಾ?
ಎನ್ನ ಕರಸ್ಥಳಕ್ಕೆ ಬಂದು ಚುಳಾಕದಿರಯ್ಯ ಅಂದ ಅಣ್ಣನ ತತ್ವ ಪ್ರಚಾರ ಮಾಡತೀನಿ ಅಂತ ಹೇಳಿ, ಜಾತ್ರ್ಯಾಗ ತಿರಗಾಡಿ ರೀಲ್ಸ ಮಾಡೂದು ತಪ್ಪಲ್ಲವೆ?
ಲಿಂಗಾಯತ ಅಂದರೆ ತತ್ವ! ಅದು ಜಾತೀಯ, ಮತ್ತು ಅಸ್ಪುರ್ಶತೆಯನ್ನ ಮೆಟ್ಟಿ ನಿಂತ ತತ್ವ, ಜಡತ್ವದಿಂದ ಚಿಂತನಶಿಲತೆಯೆಡೆಗೆ ಕರೆದುಕೊಂಡು ಹೋಗುವ ಮಾರ್ಗ! ಸೋಹಂ ನಿಂದ ದಾಸೋಹಕ್ಕ ಬಂದು ನಿಲ್ಲಿಸಿದ ಕಸುವ!
ಲಿಂಗಾಯತ ಎಂದರೆ, ಉಪದೇಶ, ಸಂಸ್ಕೃತಿ ಮತ್ತ ಪ್ರವಾದಿ ಅನ್ನುವ ಕಾಲ್ಪನಿಕ ವ್ಯವಸ್ಥೆಯನ್ನ ನಿರಾಕರಿಸಿ, ಅನುಭಾವ, ಸಂವಾದ ಮತ್ತು ಸಾಮೂಹಿಕ ನಾಯಕತ್ವ ಕಟ್ಟಿದ/ವು ಪ್ರಜಾಸತ್ಮಾಕ ವ್ಯವಸ್ಥೆ.
ಲಿಂಗಾಯತ ಅಂದರೆ, ಮೌಲ್ಯಗಳನ್ನ ಕಲ್ಲಾಗಿಸಿದ್ದಲ್ಲ, ಮನ್ವಂತರಕ್ಕೆ ಎಡೆ ಮಾಡಿದ ಸಾಧನ (tool).
ಲಿಂಗಾಯತ ಅಂದರೆ, ಬಿತ್ತಿದ ಭಯವನ್ನ , ಕಿತ್ತಿ ಎಸೆಯುವ ಗಣಾಚಾರ!
ಲಿಂಗಾಯತ ಅಂದರೆ, ಒಳಗೆ ಸುಳಿಯುವ ಆತ್ಮ ಹೆಣ್ಣು ಅಲ್ಲ ಗಂಡ ಅಲ್ಲ, ಅಂತ ಅನ್ನುವ ಸಮತಾ ಭಾವ!
ಲಿಂಗಾಯತ ಅಂದರೆ, ಗುರು(ಅರಿವು) - ಲಿಂಗ (ಆತ್ಮ) - ಜಂಗಮ (ಸಮಾಜ)ದ ಐಕ್ಯತೆ ಅದುವೆ ಜೀವನ !
ಲಿಂಗಾಯತ ಅಂದರೆ, ಹಸಿವು ನೀಗಿಸವದು, ಶ್ರೇಷ್ಟತೆಯ ವ್ಯಸನ ಕಳೆಯೋದು.
ಲಿಂಗಾಯತ ಅಂದರೆ ಶಾಸ್ತ್ರ ಅಲ್ಲ ಅದು ತತ್ವ!
ಲಿಂಗಾಯತ ಧರ್ಮ ಆಚರಣೆ ಹೆಚ್ಚಾಗಲಿ, ಯಾರಿಂದ ಧಿಕ್ಷೆಗೆ ಕಾಯಬೇಡಿ, “ಸ್ವಾಮಿಗಳ” ಆಶಿರ್ವಾದಕ್ಕ ಕಾಯಿ ಬೇಡಿ, ಯಾರ ಕಾಲು ಮುಗಬೇಡಿ, ಯಾವ ಬೆಳ್ಳಿ ಬಂಗಾರದ ಕರಡಗಿ ಮಾಡಿಸಬೇಡಿ, ಯಾವ ಕಂತಿ ಕಟ್ಟಸಬೇಡಿ, ಆಹಾರದ ಗೊಂದಲಕ್ಕ ಬಿಳಬೇಡಿ.
ಸಿಕ್ಕ ೨೪ ಸಾವಿರ ಚಿಲ್ಲರೆ ವಚನಗಳನ್ನ ಇಡಿ ಜೀವಮಾನದಲ್ಲಿ ಒಮ್ಮೆಯಾದರು ಓದಿ….ಅವಗಳ ವಚನ ನಿರ್ವಚನ ಮಾಡು ಗಂಗ್ಯಾನಗ ಬೀಳಬ್ಯಾಡರಿ…
ಸಾಲಿ, ಕಾಯಕ, ಸಂಸಾರ, ತಟಕ ವಯಕ್ತಿಕ ತಾತ್ವಿಕ ರಾಜಕಾರಣ ಇಟ್ಟ ಮಾಡಿ, ಒಂದು ಮನಿ ಕಟ್ಟರಿ, ಕಟ್ಟಿದ ಮ್ಯಾಲ ಒಂದಿಷ್ಟು, ಪ್ರವಾಸ ಮಾಡರಿ…ಮಾಡಿ ಹೊಂತುಟಲೆ ಹೋಗಿ ಬಿಡರಿ…. ಅಯ್ಯಾ ಇಟತನ ಚೋಲನೆ ಇದ್ದನಲಾ ಯವ್ವಾ..ಈಗ ಹೋಗೆ ಬಿಟ್ಟನ ಯವ್ವ..ದೇವರ ಎತಕೊಂಡು ಬಿಟ್ಟನ ಯವ್ವಾ ಅಂತ ತ್ವಾಡ್ಯಾ ಮಂದಿಗೆರೆ ಅನ್ನಸುವಂಗ ಇದ್ದು ಬಿಟ್ಟು ಹೋಗರಿ….
ಇಂತಹ ತೃಪ್ತಿಯ ಭಾವವೆ ಲಿಂಗಾಯತ ಧರ್ಮದ ಸಾರ….
ಇಲ್ಲಿತನ ಓದಿದ್ದಕ್ಕ .. ನಿಮಗ ಸಾವಿರ ಶರಣು…
ಬರೆದಂವ
#ಕೊಂಡಗೂಳಿಯಂವ
Comments
Post a Comment