ಬಸವ ಆಶಯ, ಭಿಮೋತ್ಸಾಹ.
ಮಗ ಮಲಗಿದ, ಈಗ ಟೈಮ್ ರಾತ್ರಿ ೯:೪೫. ಅವನಿಗೆ ಗೊತ್ತಿದೆ, ಅವ್ವ ಅನ್ನೊ ಶಕ್ತಿ ಹತ್ತಿರದಲ್ಲಿದೆ, ನಾಳೆ ಎದ್ದು ಮತ್ತೆ ಅಪ್ಪನ ಜೊತೆ ೧,೨....೧೦ ತನ್ ಅಂಕಿ ಎನಸ್ತಿನಿ ಅನ್ನೋ ಭರವಸೆ ನು ಇದೆ, ಮಲಗ ಬೇಕಾದ್ರೆ ತೋದಲ್ ನುಡಿಯಲ್ಲಿ ೩ ಭಾಷೆ ಮಾತಾಡಿ ಮಲಗಿದ, ಹಂಗೇ ಟಿವಿ ಸ್ಕ್ರೀನ್ ಮೇಲೆ ತನಗೆ ಇಷ್ಟವಾದ ಹಾಡ ಕೇಳಿ ಆನಂದಿಸಿ, ಕುಣಿದು ಕುಪ್ಪಳಿಸಿ, ಅವ್ವ ಅಪ್ಪಗ ಮುದ್ದು ಮಾಡಿ ಮಲಗಿದ. ಎಂತಹ ಪ್ರಕೃತಿ ಸಹಜ ಬದುಕು ಮಗನೇ? ಕಲಿಯುವ, ಆನಂದಿಸುವ ಮತ್ತ ಮುದ್ದು ಮಾಡುವ ಗುಣ ಕಲಿತಿದ್ದು ಮಗ ೨೦೨೧ರಾಗ, ಲೋಕದಲ್ಲಿ ರೋಗ ತಾಂಡವ ಆಡಿದರು, ಅವ್ವ ಅಪ್ಪನ ಲೋಕದಲ್ಲಿ ತಲ್ಲೀನನಾದ ಮಗ ಪಡೆದಿದ್ದೆ ಹೆಚ್ಚು, ಕಳೆದಿದ್ದು ಬರಿ ಸಮಯ, ನೋಡಿದ್ದು ಕತ್ತಲು, ಬೆಳಕಿನ ಆಟ ಈ ನಡುವೆ ತಾಯಿ ಅವನ ಸರ್ವಸ್ವ, ಅಪ್ಪ ಯಾವದೋ ಒಂದು ಪ್ರೀತಿಯ ಪಾತ್ರ ಅಷ್ಟೇ, ಹಾಗೆ ಅಪ್ಪನ ಗಮನ ಸೆಳೆಯಲು, ಗೋಡೆಯ ಮೇಲಿನ, ಟಿವಿಯಲ್ಲಿ ಬರುವ ಬಾಬಾಸಾಹೇಬರ ಚಿತ್ರದ ಕಡೆ ಬೆರಳು ತೋರಿಸಿ, ಬಾಬಾ ಅಂದಾಗ ಅಪ್ಪ ಪುಳಕಿತನಾಗಿ, ಕರಗಿ, ಮಗನ ಎತ್ತಿ ಎದೆ ಅವಚಿಕೊಂಡು, ಜೆನ ಮುದ್ದೂ ಗರೆದು, ಕೂಸೆ ಅಂದಾಗ ಕಿಲ, ಕಿಲ ನಗುವ ಮಗ, ನನ್ನ ವಾಸ್ತವ. ಇದೆಲ್ಲಾ ಘಟಿಸಿದ್ದು ೨೦೨೧ ರಾಗ, ಒಂದು ಸಣ್ಣ ಪ್ರತಿಜ್ಞೆ ಮಾಡಿದ್ದೆ ಮಗನಿಗೆ, ೨೨ ವರ್ಷ ಕಲಿತ ಒಂದು ಅಭ್ಯಾಸ ಹಾಗೆಯೇ ಚಿವಟಿ ಹಾಕಿದೆ ಇದೆ ವರ್ಷದಲ್ಲಿ! ಹಕ್ಕಿಗಳ ಹಾರಾಡಿ, ಸಣ್ಣ ಸಣ್ಣ ಹುಲ್ಲು ಕಡ್ಡಿ ತಂದು, ಗೂಡು ಕಟ್ಟುವ ಹಾಗೆ, ಕಾಯಕ ಮಾಡಿ ಬಂದ ಮೌ...