ಸಿಂದಗಿ - ಉಪ ಚುನಾವಣೆ
ಸಿಂದಗಿ ವಿಧಾನ ಸಭಾ ಕ್ಷೇತ್ರ ಉಪ ಚುನಾವಣೆ, ನಮ್ಮ ಕ್ಷೇತ್ರದ ಅನುಕ್ರಮ ಸಂಖ್ಯೆ ೩೩, ಇದು ಮೊದಲು ೨೨೪ ನೇ ಕ್ಷೇತ್ರವಾಗಿತ್ತು, ನನಗ ವಿಧಾನ ಸಭಾ ಕ್ಷೇತ್ರ ಅನ್ನಕಿಂತ ಪಕ್ಕದ ಮಹಾರಾಷ್ಟ್ರ ರಾಜ್ಯದಾಗ “ಮತದಾರರ ಸಂಘ” ಅಂತಾರ ಅದೇ ಭಾಳ ಹಿಡಿಸಿದ ಪದ ಯಾಕಂದ್ರ ಅದು ಜನರ ಕೇಂದ್ರಿತ ನುಡಿ ಆದರೆ ವಿಧಾನ ಸಭಾ ಕ್ಷೇತ್ರ ಅನ್ನುದು ಭೌಗಳಿಕ ಕೇಂದ್ರಿತ ಪದ, ಇಲ್ಲಿ ಜನ ಮನ ಗೌಣ ಅಗತಾದ ಅನ್ನುದು ನನ್ನ ಅಭಿಪ್ರಾಯ ಅಷ್ಟೇ, ಈ ಉಪ ಚುನಾವಣೆ, ಮನಗೂಳಿ ಮುತ್ತ್ಯಾ (ಲಿಂಗೈಕ್ಯ ಮಲ್ಲಪ್ಪ ಚನ್ನವೀರಪ್ಪ ಮನಗೂಳಿ) ಅವರ ಅಕಾಲಿಕ ಮರಣ ಹೊಂದಿದ ಕಾರಣ, ನಮ್ಮ ಚುನಾವಣಾ ಆಯೋಗ, ತೆರವಾದ ಸ್ಥಾನ ತುಂಬಲಕ್ಕ ನಡಸ ಪ್ರಕ್ರಿಯೆ, ಇದು ಒಂದು ಸ್ವಾಭಾವಿಕ ಪ್ರಕ್ರಿಯೆ. ಅದಕ್ಕ, ನಾನು ಮೂಲತಃ ಸಿಂದಗಿ ತಾಲೂಕಿನವನಾಗಿದ್ದು (ದೇವರ ಹಿಪ್ಪರಗಿ ತಾಲೂಕ ಆಗುಕಿಂತ ಮೋದಲ್ ನಮ್ಮೂರ ಕೊಂಡಗೂಳಿ ಈ ಸಿಂದಗಿ ತಾಲೂಕಿನ ಭಾಗವಾಗಿತ್ತು) ಈಗಲೂ ನನಗ ಸಿಂದಗಿ ತಾಲೂಕಿನವನೇ ಅಂತ ಹೇಳಕೊಳ್ಳಾಕ ಇಷ್ಟ, ಯಾಕ್ ಏನೋ ಗೊತ್ತಿಲ್ಲ, ಒಂದ ರೀತಿ ಭಾವನತ್ಮಕ ಸಂಬಂಧ ಅನ್ನರಿ. ಇದನ್ನ ಬರಿಕಿಂತ ಮುಂದ ನನ್ನ ಒಡತಿಯ ಮುಂದ ನನ್ನ ಮನದ ಇಂಗಿತ ಹಂಚಕೊಂಡೆ, ಆಕಿ ಬರಿದು ಬರಿತಿ ನನಗ ತಿಳಿವುಹಂಗ ಬರಿ, ಶಾಸಕ ಅಂದ್ರ ಏನು , ಅವರ ಕೆಲಸ ಏನು? ಅದರ ಬಗ್ಗೆ ಬರಿ ಅಂದಳು, ನಾ ಅರೆ ಹೊಂಬ ಗೌಡ ಆಗಿ, ಬಸವ ಭೀಮರ ತತ್ವಗಳನ್ನ ತಲ್ಯಾಗ ತುಂಬಕೊಂಡು, ಆತ್ಮಾನುಸಂಧಾನ ಮಾಡಕೊಂಡು ಭಾಳ ವಜ್ಜ...