ಬದುಕಲು ಕಲಿಯರಿ
ಕಲಿಕೆ ಬದುಕ, ಅಥವಾ ಬದುಕು ಕಲಿಕೆ? ಇವರೇಡು ಪ್ರಶ್ನೆ ಭಾಳ ಅಂತರ್ಮುಖಿ ಮಾಡ್ತಾವ, ಆದ್ರೂ ಬಿಡುದು ಇಲ್ಲ, ಇವಕ್ಕ ಉತ್ತರ ಹುಡುಕಲು ಪ್ರಯತ್ನ ಪಡುಬೇಕು ಆದೆ, ಜೀವನ, ಹಂಗೇ ಅದಕ್ಕ ತಕ್ಕಾಂಗ ನಿರ್ಣಯ ತಗೋಬೇಕು ಆಗಲೇ ಅದಕ್ಕೊಂದು ಅರ್ಥ! ಇಂತಹ ಟೈಟಲ್ ಇರು ಕ್ಯಾಸೆಟ್ಟು ನಮ್ಮ ಅಣ್ಣಾ ತಂದು ಕೊಟ್ಟಿದ್ದ ನಮಗ, ಆದ್ರ ನಾ ಸಣ್ಣವ ಇರಾಲಕ್ಕಾಗಿ ಕುತೂಹಲ, ಮಾತನಾಡುವವರ ಕಂಡರ ಭಾಳ ಖುಷಿ, ನಮ್ಮ ಮನ್ಯಾಗಿನ ಮಾತಕಿನ್ನ ಸಮಾಜದ ಮಾತ್ ಭಾಳ ಇಷ್ಟ ನನಗ್! ಅದಕ್ಕ ಈ cassette ಭಾಳ ಲಕ್ಷ ಕೊಟ್ಟು ಕೇಳಿದೆ, ನನ್ನ ಮ್ಯಾಲ ಭಾಳ ಪ್ರಭಾವ ಬೀರಿತು, ಈ ಆಸಾಮಿ ಶ್ಯಾಣೆ ಅದಾನ್ ಅಂತ, ಬಡತನದ್ದಾಗ್ ಹುಟ್ಟಿ ಬೆಳೆದಿದ್ಯ ನೋಡ್ರಿ, ಇವರ ಸರಳತನ, ಎಮೋಷನಲ್ validate ಮಾಡ್ತು, ಯಪ್ಪ ದೊಡ್ಡವರ ಹೀಂಗ, ನಮ್ಮಪ್ಪ ನಮ್ಮ ಅವ್ವ ಹೊಸ ಅಂಗಿ ಚೆಡ್ಡಿ ಕೊಡಲಿಲ್ಲ ಅಂದ್ರು ಹಿಂಗಿದ್ದು ಬಿಡಬೇಕು...ಅಂದ್ರ aspiration ಬಿಟ್ಟು conformist ಆಗಿ ಬಿಡಬೇಕು, ಆದ್ರೂ ನನ್ನ ಕುತೂಹಲ ಮನಸ್ಸ ಸುಮ್ಮ ಕುಂದ್ರಿಲಿಲ್ಲ, ಮತ್ತ ಒದತು, ಏನ? ಅಣ್ಣ ಬಸವಣ್ಣನ, ಬಾಬಾಸಾಹೇಬರನ್ನ, ಹಂಗೇ ನನ್ನ ಸುತ್ತ ಮುತ್ತ ಇದ್ದವರ್ ಜೀವನ್, ಆದ್ರೂ ನನ್ನ ಕಲ್ಪನೆಗಳ ಪಟ್ಟಿ ಬರೀತಾ ಹೋದೆ, ಮೊದಲ ಗುರುವಿನ ಕಲ್ಪನೆ ಬರದ್ಯ, ಅಪ್ಪನ ಜೀವನ್ ಬರದ್ಯಾ, ಹಂಗೇ ಬರೀತಾ ಬರೀತಾ, ಈ ಕ್ಯಾಸೆಟ್ಟ ಮನುಷ್ಯರ ನಂಬದ್ಯಾ, ಎಲ್ಲಿವರಿಗೆ ಅಂದ್ರ ದೇವರ ಕಲ್ಪನೆ ಅಂತ ಬರಿಬೇಕದ್ರ ಇವರ ಹೆಸ್ರ ಉಲ್ಲೇಖಿಸಿದೆ, ದೇವರ ನಿನ್ನಾ ನೋ...