ಬದುಕಲು ಕಲಿಯರಿ

ಕಲಿಕೆ ಬದುಕ, ಅಥವಾ ಬದುಕು ಕಲಿಕೆ? ಇವರೇಡು ಪ್ರಶ್ನೆ ಭಾಳ ಅಂತರ್ಮುಖಿ ಮಾಡ್ತಾವ, ಆದ್ರೂ ಬಿಡುದು ಇಲ್ಲ, ಇವಕ್ಕ ಉತ್ತರ ಹುಡುಕಲು ಪ್ರಯತ್ನ ಪಡುಬೇಕು ಆದೆ, ಜೀವನ, ಹಂಗೇ ಅದಕ್ಕ ತಕ್ಕಾಂಗ ನಿರ್ಣಯ ತಗೋಬೇಕು ಆಗಲೇ ಅದಕ್ಕೊಂದು ಅರ್ಥ! ಇಂತಹ ಟೈಟಲ್ ಇರು ಕ್ಯಾಸೆಟ್ಟು ನಮ್ಮ ಅಣ್ಣಾ ತಂದು ಕೊಟ್ಟಿದ್ದ ನಮಗ, ಆದ್ರ ನಾ ಸಣ್ಣವ ಇರಾಲಕ್ಕಾಗಿ ಕುತೂಹಲ, ಮಾತನಾಡುವವರ ಕಂಡರ ಭಾಳ ಖುಷಿ, ನಮ್ಮ ಮನ್ಯಾಗಿನ ಮಾತಕಿನ್ನ ಸಮಾಜದ ಮಾತ್ ಭಾಳ ಇಷ್ಟ ನನಗ್! ಅದಕ್ಕ ಈ cassette ಭಾಳ ಲಕ್ಷ ಕೊಟ್ಟು ಕೇಳಿದೆ, ನನ್ನ ಮ್ಯಾಲ ಭಾಳ ಪ್ರಭಾವ ಬೀರಿತು, ಈ ಆಸಾಮಿ ಶ್ಯಾಣೆ ಅದಾನ್ ಅಂತ, ಬಡತನದ್ದಾಗ್ ಹುಟ್ಟಿ ಬೆಳೆದಿದ್ಯ ನೋಡ್ರಿ, ಇವರ ಸರಳತನ, ಎಮೋಷನಲ್ validate ಮಾಡ್ತು, ಯಪ್ಪ ದೊಡ್ಡವರ ಹೀಂಗ, ನಮ್ಮಪ್ಪ ನಮ್ಮ ಅವ್ವ ಹೊಸ ಅಂಗಿ ಚೆಡ್ಡಿ ಕೊಡಲಿಲ್ಲ ಅಂದ್ರು ಹಿಂಗಿದ್ದು ಬಿಡಬೇಕು...ಅಂದ್ರ aspiration ಬಿಟ್ಟು conformist ಆಗಿ ಬಿಡಬೇಕು, ಆದ್ರೂ ನನ್ನ ಕುತೂಹಲ ಮನಸ್ಸ ಸುಮ್ಮ ಕುಂದ್ರಿಲಿಲ್ಲ, ಮತ್ತ ಒದತು, ಏನ? ಅಣ್ಣ ಬಸವಣ್ಣನ, ಬಾಬಾಸಾಹೇಬರನ್ನ, ಹಂಗೇ ನನ್ನ ಸುತ್ತ ಮುತ್ತ ಇದ್ದವರ್ ಜೀವನ್, ಆದ್ರೂ ನನ್ನ ಕಲ್ಪನೆಗಳ ಪಟ್ಟಿ ಬರೀತಾ ಹೋದೆ, ಮೊದಲ ಗುರುವಿನ ಕಲ್ಪನೆ ಬರದ್ಯ, ಅಪ್ಪನ ಜೀವನ್ ಬರದ್ಯಾ, ಹಂಗೇ ಬರೀತಾ ಬರೀತಾ, ಈ ಕ್ಯಾಸೆಟ್ಟ ಮನುಷ್ಯರ ನಂಬದ್ಯಾ, ಎಲ್ಲಿವರಿಗೆ ಅಂದ್ರ ದೇವರ ಕಲ್ಪನೆ ಅಂತ ಬರಿಬೇಕದ್ರ ಇವರ ಹೆಸ್ರ ಉಲ್ಲೇಖಿಸಿದೆ, ದೇವರ ನಿನ್ನಾ ನೋಡಿದವರು ಇದ್ದಾರೆ? ಇದ್ದರೆ ಅವರ ಮಾತಿಗೆ ಕಿವಿಯಾಗ್ಲೆ? ಅಂತ! ಮತ್ತೊಂದು ಕಡೆ ಈ ಊರಿನ ಮಾತ್ ಕೇಳಬೇಕೆಂದರ, ಇವರ ಬಾಯಿಲೆ ಕೇಳ್ತೀನಿ ಅಂತಾ! ಆ ಲೇವೆಲ್ಗೆ ಈ ಬದುಕಲು ಕಲಿರಿ ಅಂತ ಹೇಳಿದವರ ಮ್ಯಾಲ ಫಿದಾ ಅಗಿದ್ಯ. ಇವರ ಕ್ಯಾಸೆಟ್ ತಂದು ಕೊಟ್ಟಿದ್ರಲ್ ಅವರಿಗೆ ಒಮ್ಮೆ ಕೇಳಿದೆ, ಏನಪ್ಪ ಈ ಮನುಷ್ಯ ಇಟ್ಟ ಮಾತಾಡ್ತಾನೆ, ನಮ್ಮ ಬವಣೆ ಯಾಕ್ ಬಗಿ ಹರ್ಸು ಕೆಲಸ ಮಾಡಂಗಿಲ್ಲ, ಈ ಮನುಷ್ಯ ಅಂದೆ, ಅದಕ್ಕ ಅವರು ಎನಂದ್ರ ಗೊತ್ತಾ, ಎಲ್ಲವೂ, ಎಲ್ಲರಿಂದ ಬಯಸಬಾರದು, ಅವರ ಸ್ಕೋಪ್ ಬೇರೇನೇ ಅಂತ, ನನ್ನ ಮನಸ್ಸ ಭಾಗಶಃ ಒಪ್ಪಿಕೊಂಡು ಬಿಟ್ಟು, ಮುಂದೆ ಅವರ ಕ್ಯಾಸೆಟ್ ಸಮೀಪ ಹೋಗಲಿಲ್ಲ, ಆದ್ರ ಅದಾಕಿನ್ನ ಮೊದಲ ನಾಲ್ಕು ಭೇಟಿ ಆಗಿದ್ದವು, ಅದನ್ನ ತಟಕ್ ಒದ್ರಿ, ಬಯ್ಯುಕಿನ್ನ ಮೊದಲ ಓದ್ರಿ! ಪಾಪ್ ಅವರೆಂದೂ, ಬಯ್ಯಿದು ಕಲಿಸಿಲ್ಲ ಆದ್ರೂ, ಅವರ ಭಕ್ತರಾಗಿ, ಬಯ್ಯುದು ತಪ್ಪ, ಅದರಾಗ ಸಂಸ್ಕೃತ ಭಾಷೆಯಂದ ಬಯ್ಯದು ತೀರಾ ತಪ್ಪ. ಈಗ ತಟಕ, ಅವರ ನನ್ನ ಬೇಟಿ ಬಗ್ಗೆ ತಿಲ್ಕೊಳರಿ, ಮೊದಲನೆ ಭೆಟ್ಟಿ, ೨೦೦೬, ಮತ್ತ ೨೦೦೯, ಆಮ್ಯಾಲ ೨೦೧೧. ಒಟ್ಟ ನಾಕು ಭೇಟಿ, ಎರಡೂ ಊರಾಗ, ಮೂರು ಬಿಜಾಪೂರನ್ಯಾಗ, ಒಂದು ಯಡ್ರಾಮಿ ಊರಾಗ, ಅವರು ನಾಲ್ಕು ಸಲಾ ಸಮಾನ ಮನಸ್ಕರ ರೀತಿಯಲ್ಲೇ ಮಾತನಾಡಿದ್ದು, ಆದ್ರೆ ಯಾಡ್ರಾಮಿಯಲ್ಲಿ ಆದ ಸಂವಾದ ಭಾಳ ಚೆಂದ ಇತ್ತು, ಅದರಿಂದ ಒಂದು ದೊಡ್ದ ಕೆಲಸ ಆಗಬಹುದಿತ್ತು, ಏನು ಗೊತ್ತಾ? ನೀವೂ ನಡೆಸುವ ಪ್ರತಿ ಪ್ರವಚನದಲ್ಲಿ, ಉಚಿತ ಆರೋಗ್ಯ ತಪಾಸಣೆ ನಡೆಸಿ ಅಂತ ಕೇಳಿಕೊಂಡಿದ್ದೆ, ಅವರು ಭಾಳ ಖುಶಿ ಪಟ್ಟಿದ್ದರು, ಆದ್ರೆ ಅದು mutually ಬದ್ಧತೆ ಇರಲಾರದ ಕಾರಣ ನಡೆಯಲಿಲ್ಲ. ಆದ್ರೆ ಇಷ್ಟೇಲ್ಲಾ ಆದ್ರೂ ಕೂಡಾ ನನ್ನ ಕೊರಗು ಏನು ಅಂದ್ರೆ, ತಿಳಿಯದ, ಅರಿಯದ ಭಾಷೆಯ ತತ್ವ ಹೇಳುವ ಮನುಷ್ಯ, ತನ್ನ ನೆಲ ಮೂಲದ ಲಿಂಗಾಯತ ತತ್ವ ವ್ಯಕ್ತ ಪಡಿಸಲೇ ಇಲ್ಲಾ? ಯಾಕೆ? ಆಶ್ರಮ ಕಟ್ಟಿ ಅದರ ಸುತ್ತ ಮುತ್ತ ಬರಿ ಒಂದೇ ತತ್ವ ನಂಬಿದವರಿಗೆ ಮಿಸಾಲಗು ರೀತಿಯ ಧೋರಣೆ ವ್ಯಕ್ತ ಪಡಿಸಿದರು ಯಾಕೆ? ಪದ್ಮಶ್ರೀ ಪ್ರಶಸ್ತಿಯನ್ನು ಧಿಕ್ಕರಿಸಿದ ವ್ಯಕ್ತಿ, ಒಬ್ಬ ವ್ಯಕ್ತಿಯನ್ನ ಬೇಟಿ ಆಗಿದ್ದು ಸುದೈವ ಅನ್ನುವ ದ್ವಂದ್ವ ಯಾಕೆ? ಒಬ್ಬ ಸುಳ್ಳು ಹೇಳ್ತಾ ಇದಾನೆ ಅಂತ ಗೊತ್ತಿದ್ದರೂ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದು ಯಾಕೆ? ಇದು ವಯಕ್ತಿಕ ಕೋರಿಕೆ ಮಾಜಿ ನೀರಾವರಿ ಸಚಿವರಲ್ಲಿ, ಇಂತಹವರು ಹೇಳಿದ್ದಕ್ಕೆ ಮಾಡಿದ್ದೇನೆ, ಅಂತ ಹೇಳುವದು ಬಿಟ್ಟು, ನಿಮ್ಮ ಇಚ್ಚಾಶಕ್ತಿ, ಸರಕಾರದ ಬದ್ಧತೆ ಮತ್ತು ಜನರ ಅಪೇಕ್ಷೆ ಮೇರೆಗೆ ಬಿಜಾಪೂರ ಜಿಲ್ಲೆಯನ್ನ ನೀರಾವರಿ ಮಾಡಿದ್ದೂ ಅಂತ ಹೇಳಿ, ಈ cassette ಮನುಷ್ಯ, ಬಹುಜನರ ಕಡೆ ಕೆಲಸ ಮಾಡಿಕೊಂಡು, ಬ್ರಾಹ್ಮಣ್ಯಕ್ಕ ಬಹು ಪರಾಖ ಹೇಳು ಮಂದಿ, ಇದನ್ನ ತಾವು ಗಮನಿಸಬೇಕು. ಬದುಕಲು ಕಲಿಯಿರಿ ಅಂತ ಹೇಳಿ ಹೆಲಿಕಾಫ್ಟರ್ ಕಳಸಿದ ದೋಸ್ತನ ಜೊತಿ ಕೂಡಿ ಸಂಸ್ಕೃತ ವಿದ್ಯಾಲಯ ಚಾಲೂ ಮಾಡ್ತಾರ, ಇವರಿಬ್ಬರೂ ಲಿಂಗಾಯತರನ್ನು ವೈಚಾರಿಕ ಗುಲಾಮರನ್ನಾಗಿ ಮಾಡ್ತಾ ಇದಾರೆ, ಇವರ ಭಕ್ತರ ಸಂಸ್ಕೃತ ಕೇಳಿದ್ರೆ ಭಯಾನಕ ಅನ್ನಿಸ್ತಾದ, ಆದ್ರೂ ಅಣ್ಣಾ ಬಸವಣ್ಣ ಮತ್ತು ಬಾಬಾಸಾಹೇಬರ ಆತ್ಮದ ಮಾತ್ ಧೈರ್ಯ ನೀಡತಾದ.... ಶರಣು ಶರಣಾರ್ಥಿ ಜೈ ಭೀಮ!

Comments

  1. ಬಹಳ ಚಂದ ಬರದಿ ಬಸಣ್ಣ...ಈ ವಚನ ಬೋಧನೆ ವಿದ್ಯಾಲಯ ಮಾಡಬೇಕಾದ ಸ್ವಾಮಿಗೋಳು ಸಂಸ್ಕೃತ ವಿದ್ಯಾಲಯ ತೆಗಿತಾವು,ವೇಧಗಳ ಬೋಧನೆ ಮಾಡ್ತಾವು...

    ಮತ್ತ ನಿಮ್ಮ ಕ್ಯಾಸೆಟ್ ಸ್ವಾಮಿ ಜುಬಾನ್ ಕೇಸರಿ ಅದ...

    ReplyDelete

Post a Comment

Popular posts from this blog

The Eternal Bridge: From the 12th-Century Vachana Movement to Global Social Justice

The Deccan Cross: A Unified Vision for Karnataka's Economic Future

ಜಗತ್ತಿಗೊಂದು ಶಾಂತಿ ಮಂತ್ರ: ಕುವೆಂಪು-ಬಸವಣ್ಣನವರ ಹಾದಿ ನಮಗೆ ದಾರಿ