ಭಾರತ ೭೫!
ದಣಿವರಯದ, ದಮನಿತರ "ಸ್ವತಂತ್ರ್ಯ" ಕ್ಕ್ ೭೫! ಉತ್ಸಾಹ, ಉಲ್ಲಾಸ ಅನೇಕರಲ್ಲಿ, ಮನೆ ಮಾಡಿದೆ ಉಳ್ಳವರಲ್ಲಿ. ಉಳ್ಳವರ ಹೊಸ ಇರಾದೆ, ಹೇರಿಕೆ, ದೌರ್ಜನ್ಯದ ನಡುವೆ, ದಣಿವರಿಯದ, ದಮನಿತ ವರ್ಗಗಳ ಕಾಯಕ, ನಿರಂತರ ನಡೆಯುತ್ತಲೇ ಇದೆ, ಉಳ್ಳವರ ಸ್ವಚ್ಚ, ನಿರ್ಮಲ, ಸ್ವಾತಂತ್ರ್ಯಾದ ಬದುಕು ಕಟ್ಟಲು, ಅವರು ಹೊಸ ಕನಸು ಕಾಣಲು! ೭೫ ರ ಉತ್ಸವ ಕೂಡಾ ಕೃತಕವಾಗಿಸಿದ ಹಮ್ಮಿರ್, ಕಸುವು ಉಳ್ಳ ಕನಸು ಕಾಣಲೇ ಇಲ್ಲ, ಹುಸಿ ಭರವಸೆ ಬಿತ್ತಿ ಬೆಳೆದು ಬಿಟ್ಟ, ಸಾಮರಸ್ಯದ ಬದುಕಿನಲ್ಲಿ ಬಿರುಕು ಮೂಡಿಸಿ ಬಿಟ್ಟ, ಹಿರಿ ಮಗನಾಗಿ, ಎಲ್ಲರನ್ನು ಒಳಗೊಳ್ಳುವ ಕಸವು, ಇಚ್ಚಾಶಕ್ತಿ ವ್ಯಕ್ತ ಪಡಿಸಲೇ ಇಲ್ಲ, ದೊಡ್ಡ ಧ್ವನಿ, ದಡ್ಡ ಧ್ವನಿಯಾಗಿ ಭಾಸವಾಗತಿದೆ. ಶ್ರೇಷ್ಟತೆಯ ವ್ಯಸನದ ಸಮಾಜದಲ್ಲಿ, "ನಾವೆಲ್ಲರೂ ಭಾರತೀಯರು ಒಂದೇ" ಅನ್ನುವ ಸಮಾನತೆಯ ಭಾವ ಅಕ್ಷರಗಳಲ್ಲಿ ಲಿನವಾಗಿದೆ. ಈ ಭಾವವನ್ನು ಅಭಿವ್ಯಕ್ತಗೊಳಿಸುವ ಸಂಸ್ಥೆಗಳು, ಸರ್ಕಾರದ ಅಸಹಕಾರ ಧೋರಣೆಯಿಂದ ತಮ್ಮ ಅಸ್ತಿತ್ವ ಕಳೆದುಕೊಳ್ಳುವ, ಅಥವಾ ಹೊಂದಾಣಿಕೆಯ ಹಾದಿಯಲ್ಲಿ ಸಾಗುವ ಕುರುಹುಗಳು ಆಗಿ ಕಂಡು ಬರುತ್ತವೆ. ಹೊಸ ಕನಸ ಕಂಡಿದ್ದೇವು, ೭೫ ವರ್ಷದ ಹಿಂದೆ, ನಾವೆಲ್ಲರೂ ಭಾರತೀಯರು ಆಗೋಣ, ಭಾರತೀಯ ತತ್ವ ಸಿದ್ಧಾಂತ ಎತ್ತಿ ಹಿಡಿಯುತ್ತ ನಮ್ಮ ಸಾರ್ವಭೌಮತ್ವವನ್ನು ಪ್ರತಿಪಾದಿಸೋಣ, ವೈಜ್ಞಾನಿಕತೆ ಮರೆಯೋಣ ಅಂತ, ಜಾತೀಯತೆ ಇಲ್ಲದ ಭಾವದ ಬೇಳೆ ಬೇಳೆಯೋಣ ಅಂತ, ಆದ್ರೆ ಆ ದಾರಿಯನ್ನು ಇನ್ನೂ ತುಳಿಯುತ್ತ...