ಭಾರತ ೭೫!

ದಣಿವರಯದ, ದಮನಿತರ "ಸ್ವತಂತ್ರ್ಯ" ಕ್ಕ್ ೭೫! ಉತ್ಸಾಹ, ಉಲ್ಲಾಸ ಅನೇಕರಲ್ಲಿ, ಮನೆ ಮಾಡಿದೆ ಉಳ್ಳವರಲ್ಲಿ. ಉಳ್ಳವರ ಹೊಸ ಇರಾದೆ, ಹೇರಿಕೆ, ದೌರ್ಜನ್ಯದ ನಡುವೆ, ದಣಿವರಿಯದ, ದಮನಿತ ವರ್ಗಗಳ ಕಾಯಕ, ನಿರಂತರ ನಡೆಯುತ್ತಲೇ ಇದೆ, ಉಳ್ಳವರ ಸ್ವಚ್ಚ, ನಿರ್ಮಲ, ಸ್ವಾತಂತ್ರ್ಯಾದ ಬದುಕು ಕಟ್ಟಲು, ಅವರು ಹೊಸ ಕನಸು ಕಾಣಲು!

೭೫ ರ ಉತ್ಸವ ಕೂಡಾ ಕೃತಕವಾಗಿಸಿದ ಹಮ್ಮಿರ್, ಕಸುವು ಉಳ್ಳ ಕನಸು ಕಾಣಲೇ ಇಲ್ಲ, ಹುಸಿ ಭರವಸೆ ಬಿತ್ತಿ ಬೆಳೆದು ಬಿಟ್ಟ, ಸಾಮರಸ್ಯದ ಬದುಕಿನಲ್ಲಿ ಬಿರುಕು ಮೂಡಿಸಿ ಬಿಟ್ಟ, ಹಿರಿ ಮಗನಾಗಿ, ಎಲ್ಲರನ್ನು ಒಳಗೊಳ್ಳುವ ಕಸವು, ಇಚ್ಚಾಶಕ್ತಿ ವ್ಯಕ್ತ ಪಡಿಸಲೇ ಇಲ್ಲ, ದೊಡ್ಡ ಧ್ವನಿ, ದಡ್ಡ ಧ್ವನಿಯಾಗಿ ಭಾಸವಾಗತಿದೆ.

ಶ್ರೇಷ್ಟತೆಯ ವ್ಯಸನದ ಸಮಾಜದಲ್ಲಿ, "ನಾವೆಲ್ಲರೂ ಭಾರತೀಯರು ಒಂದೇ" ಅನ್ನುವ ಸಮಾನತೆಯ ಭಾವ ಅಕ್ಷರಗಳಲ್ಲಿ ಲಿನವಾಗಿದೆ. ಈ ಭಾವವನ್ನು ಅಭಿವ್ಯಕ್ತಗೊಳಿಸುವ ಸಂಸ್ಥೆಗಳು, ಸರ್ಕಾರದ ಅಸಹಕಾರ ಧೋರಣೆಯಿಂದ ತಮ್ಮ ಅಸ್ತಿತ್ವ ಕಳೆದುಕೊಳ್ಳುವ, ಅಥವಾ ಹೊಂದಾಣಿಕೆಯ ಹಾದಿಯಲ್ಲಿ ಸಾಗುವ ಕುರುಹುಗಳು ಆಗಿ ಕಂಡು ಬರುತ್ತವೆ.

ಹೊಸ ಕನಸ ಕಂಡಿದ್ದೇವು, ೭೫ ವರ್ಷದ ಹಿಂದೆ, ನಾವೆಲ್ಲರೂ ಭಾರತೀಯರು ಆಗೋಣ, ಭಾರತೀಯ ತತ್ವ ಸಿದ್ಧಾಂತ ಎತ್ತಿ ಹಿಡಿಯುತ್ತ ನಮ್ಮ ಸಾರ್ವಭೌಮತ್ವವನ್ನು ಪ್ರತಿಪಾದಿಸೋಣ, ವೈಜ್ಞಾನಿಕತೆ ಮರೆಯೋಣ ಅಂತ, ಜಾತೀಯತೆ ಇಲ್ಲದ ಭಾವದ ಬೇಳೆ ಬೇಳೆಯೋಣ ಅಂತ, ಆದ್ರೆ ಆ ದಾರಿಯನ್ನು ಇನ್ನೂ ತುಳಿಯುತ್ತಿಲ್ಲ ಅನ್ನುವ ಖೆದ, ಯಾಕೆ ಹೀಗೆ? ಒಂದು ಕಲ್ಪಿತ ವ್ಯವಸ್ಥೆಯನ್ನ ಅಲುಗಾಡಿಸಿದಷ್ಟು, ಬಿಗಿಯಾಗಿ ಅಪ್ಪಿಕೊಂಡಿದ್ದೇವೆ?

ಪ್ರಾತಿನಿಧ್ಯತ್ವ, ಸಹಭಾಗ ಗೊಳ್ಳುವ ಪ್ರಕ್ರಿಯೆಯನ್ನು, ಮೀಸಲಾತಿ ಎಂಬ ಕೀಳು ಪದಗಳಿಂದ ಅಲ್ಲಗಳಿತಾ ಇದ್ದೇವೆ? ಸಾರ್ವಜನಿಕ ಸೇವೆ ಮತ್ತು ಸ್ಥಳಗಳಲ್ಲಿ, ಸಮಾನ ಅವಕಾಶ ಬಯಸುವುದು ನಮ್ಮ ಸಂವಿಧಾನದ ಹಕ್ಕು ಅಲ್ಲವಾ? ಅರ್ಥಿಕ ಅಸಮಾನತೆ ಮತ್ತು ಸಾಮಾಜಿಕ ಅಸಮಾನತೆ ಅಂದ್ರೆ ಏನು ಅಂತ ಅರಿವು ಮೂಡಿಸದಷ್ಟು ಸರ್ಕಾರ/ ಸಾರ್ವಜನಿಕ ಅಧಿಕಾರ ವರ್ಗ ನಿಸ್ಸಹಾಯಕ ಸ್ಥಿತಿಯಲ್ಲಿ ಇದಿಯಾ?

ನಾವು ಎನ್ನುವ ತತ್ವ, ವಿಶಾಲವಾದದ್ದು ಆದ್ರೆ "ನಾವು" ಆಗ್ತಾ ಇರೋದ, ತಿನ್ನುವ ಆಹಾರದ ಆಧಾರದ ಮೇಲೆ, ತೊಡುವ ಬಟ್ಟೆಯ ಮೇಲೆ, ಆಡುವ ಭಾಷೆಯ ಮೇಲೆ, ಜಾತೀಯ ಭಾವದ ಮೇಲೆ, ಕಟ್ಟ ಕಡೆಗೆ ಧಾರ್ಮಿಕ ತತ್ವದ ಮೇಲೆ. ಐಕ್ಯತೆಗೆ ಗುರುತಿಸಿಕೊಂಡವರು, ಜಗತ್ತು ಗುರುತಿಸಿದ್ದು ಕೂಡಾ ನಮ್ಮ ಐಕ್ಯತೆಗೆ ಹೊರತು ಏಕತೆಗೆ ಅಲ್ಲ ಅನ್ನೋದು ಯುವ ಭಾರತೀಯರು ಅರಿಯಬೇಕು.

ದೊಡ್ಡ ದೊಡ್ಡ ಮನೆ ಕಟ್ಟಿ, ಸೆಕ್ಯೂರಿಟಿ ಗಾರ್ಡ್ಗ ಸಣ್ಣ ಕಿಯೋಸ್ಕ ಕಟ್ಟಿ, ನೀವು ಹೋಗುವಾಗ ಮತ್ತು ಬರುವಾಗ salute ಹೊಡೆಯಲು ಕಟ್ಟಿದ ಶ್ರೀಮಂತ ಗೇಟೆಡ್ ಕಮ್ಯೂನಿಟಿ ಯ ಜನಕ್ಕೆ ನಿಮಗೆ ಆ ವ್ಯಕ್ತಿ ಭಾರತೀಯ ಅನ್ನಿಸ್ಸಿಲ್ವಾ? ಅನ್ನಿಸಿದರೆ ಅವರು ನಿಮಗೆ ಯಾಕೆ salute ಹೊಡೆಯಬೇಕು?

ನಾನು ದಲಿತರ ಮನೆಯಲ್ಲಿ ಉಂಡೆ, ಅದಕ್ಕ ಜಾತೀಯತೆ ಇಲ್ಲ ಅನ್ನುವ, (ಓಲ್ಡ್ wine in new bottle) ಜನಾಂಗಕ್ಕೆ, ದೇಶ ಅಂದ್ರೆ ಮಣ್ಣಲ್ಲ, ಅದು ಜೀವಂತ ಜನ, ದನ ಮತ್ತು ಪ್ರಕೃತಿ ಸಂಕುಲ, ಈ ಸಂಕುಲದಲ್ಲೀ ಇರುವ ಜೀವಿಗಳಲ್ಲಿ ವಿವೇಕ ಉಳ್ಳ ಜೀವಿಗಳು, ವಿವೇಕ ಇಲ್ಲದ ಜೀವಿಗಳ ಜೊತೆ ಮತ್ತು ತಮ್ಮ ತಮ್ಮಲ್ಲೇ, ಸಂವೇದನಾಶೀಲ ಬದುಕೂ ಕಟ್ಟಿಕೊಳ್ಳಲು ಇರುವ ವ್ಯವಸ್ಥೆಯೇ ಪ್ರಜಾಪ್ರಭುತ್ವ! ಇಲ್ಲಿ ಸಂವಾದ ನಡೆಯಬೇಕಿರುವದು, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಲು, ನಂಬಿಕೆಗಳಿಗೆ ದುಖಃ ಆದಾಗ ವಿವೇಕವವನ್ನು ಕೊಲೆ ಮಾಡುವ ಕೆಲಸ ಆಗ ಬಾರದು. ಜಾತೀಯ ಅಮಾನವೀಯ ನಿಲುವು, ಧೋರಣೆಗಳನ್ನು ಯುವ ಭಾರತೀಯರು ಅರಿಯಬೇಕು, ಇದು ಶಿಕ್ಷಣ ಭಾಗ ಆಗಬೇಕು.

ಬನ್ನಿ ಏಕ್ಯತೆಯ ಭವ್ಯ ಭಾರತದ ಜನಗಣಮನ ಕಟ್ಟೋಣ.

ರಾಜಕೀಯ ಸ್ವಾತಂತ್ರ್ಯ ಅನುಭಾವಿಸಿದ, ಆಚರಿಸಿದ, ಉತ್ಸಾಹ ಉಲ್ಲಾಸ ಉಳ್ಳ ೧೪೦ ಕೋಟಿ ಜನರಿಗೆ ಶರಣು, ಇನ್ನೂ ಹೆಜ್ಜೆ ಹಾಕೋಣ ಸಮಾಜಿಕ ಸ್ವಾಂತಂತ್ರದೆಡೆಗೆ!

ಜಯವಾಗಲಿ ಭಾರತಕ್ಕೆ.

ಇಂತಿ,
ಕೊಂಡಗೂಳಿಯಂವ
#IndiaAt75

Comments

Popular posts from this blog

The Eternal Bridge: From the 12th-Century Vachana Movement to Global Social Justice

The Deccan Cross: A Unified Vision for Karnataka's Economic Future

ಜಗತ್ತಿಗೊಂದು ಶಾಂತಿ ಮಂತ್ರ: ಕುವೆಂಪು-ಬಸವಣ್ಣನವರ ಹಾದಿ ನಮಗೆ ದಾರಿ