Posts

Showing posts from March, 2026

ಜಗತ್ತಿಗೊಂದು ಶಾಂತಿ ಮಂತ್ರ: ಕುವೆಂಪು-ಬಸವಣ್ಣನವರ ಹಾದಿ ನಮಗೆ ದಾರಿ

Image
ಭಾರತದಾಗ ಬಹುತೇಕ ಮಂದಿ ಇವತ್ತು ಒಬ್ಬ ಪ್ರೀತಿಯ ನಾಯಕನ ಅಗಲಿಕೆಯ ದುಃಖದಾಗ ಅದಾರ. ಆದರೆ ಇಂತಾ ಟೈಮ್‌ನ್ಯಾಗೂ ಕೆಲವ್ರು ಮುಸ್ಲಿಂ ಸಮಾಜದವರನ್ನ "ಅನ್ಯರು" ಅಂತಾ ಅನ್ನೋದು, ಅವರನ್ನು ಗೇಲಿ ಮಾಡೋದು, ಅಷ್ಟಕ್ಕ ನಿಲ್ಲದ ಅವರನ್ನು ಬರಿ ಒಂದು "ಪಾರ್ಟಿ"ಗೆ ಸೀಮಿತ ಮಾಡೋದು ನೋಡಿದ್ರ ಬಹಳ ಸಂಕಟ ಆಕ್ಕೈತಿ. ಇವತ್ತು ನಾವು ಕುವೆಂಪು ಅವ್ರ 'ವಿಶ್ವಮಾನವ' ತತ್ವ ಮತ್ತು ಬಸವಣ್ಣನವರ 'ಇವ ನಮ್ಮವ' ಅನ್ನೋ ದೊಡ್ಡ ಗುಣವನ್ನ ಮತ್ತೊಮ್ಮೆ ನೆನಪು ಮಾಡ್ಕೋಬೇಕಾಗೈತಿ. ವಿಶ್ವಮಾನವ ಅಂದ್ರ ಏನ್ರೀ? ನಮ್ಮ ಕುವೆಂಪು ಅಜ್ಜ ಹೇಳಿದ್ರು, "ಮಗು ಹುಟ್ಟುವಾಗ ವಿಶ್ವಮಾನವ ಇರ್ತೈತಿ, ಅದನ್ನ ಬೆಳೆಯುತ್ತಾ ಅಲ್ಪಮಾನವ ಮಾಡ್ತೀವಿ" ಅಂತಾ. ನಾವು ಇವತ್ತು ಜಾತಿ-ಧರ್ಮದ ಹೆಸರಿನಾಗ ಗೋಡೆ ಕಟ್ಕೊಂಡು ಕುಂತೇವಿ. ಯಾರನ್ನೋ ನೋಡಿ ನಕ್ಕರೆ ಇಲ್ಲಾ ಅವರನ್ನು ಕೀಳಾಗಿ ಕಂಡರೆ ನಮ್ಮ ಸಂಸ್ಕೃತಿ ದೊಡ್ಡದಾಗಂಗಿಲ್ಲ. ಬಸವಣ್ಣನವರು ಎಷ್ಟೋ ವರ್ಷದ ಹಿಂದ ಹೇಳ್ಯಾರ, "ಇವನಾರವ ಇವನಾರವ ಅನ್ನಬೇಡ್ರಿ, ಇವ ನಮ್ಮವ ಇವ ನಮ್ಮವ ಅನ್ರಿ" ಅಂತಾ. ಒಬ್ಬ ಮನುಷ್ಯನನ್ನು ಬರಿ ಒಂದು ವೋಟ್ ಹಾಕೋ ಮಂದಿ ಅಂತಾ ಅಂದ್ಕೊಳ್ಳೋದು ಅವರಿಗೆ ಮಾಡೋ ಅವಮಾನ ಅಲ್ಲೇನ್ರಿ? ಅಪನಂಬಿಕೆಯ ವಿಷವರ್ತುಲ: ಅಮೆರಿಕ-ಇರಾನ್ ಸಂಘರ್ಷದಿಂದ ನಾವು ಕಲಿಯಬೇಕಾದ್ದು ಜಗತ್ತಿನಾಗ ಈ ಅಮೆರಿಕ ಮತ್ತು ಇರಾನ್ ನಡುವಿನ ಜಗಳ ನೋಡಿದ್ರ ನಮಗೊಂದು ಬುದ್ಧಿ ಬರ...