ಲಿಂಗಾಯತ ಅಂದರೇನು?
ಜಾತಿ! ಅಂತ ಮಾಧ್ಯಮ ಬರಿತಾವ? ಹಂಗಂದರ ಅದು ಜಾತಿನಾ? ಜಾತಿಯಾಗಿದ್ದರೆ, ೭೭೦ ಮಂದಿ ಒಂದೆ ಜಾತಿಯಾಗಿರಬಹುದಿತ್ತಲ್ಲ? ಅದು ಬಿಡಿ ಲಿಂಗಾಯತರ ಕೋಟಾದಲ್ಲಿ ರಾಜಕೀಯ ಪಕ್ಷದ ಅಭ್ಯರ್ಥಿ ಆದವರೆಲ್ಲಾ, ಒಂದೆ ಜಾತಿಯವರೆ? ಹಾಗಿದ್ದರೆ ಆಯಾ ಜಾತಿಯ ಸಂಖ್ಯೆದಡಿಯಲ್ಲಿ ಯಾಕ ಟಿಕೇಟ ವಿತರಣೆ ಆಯಿತು? “ನಮ್ಮ ಲಿಂಗಾಯತರಿಗಿ ೨ಡಿ” ಕೊಡಿ ಅಂತ ಹೇಳಾಂವ ಎಲ್ಲಾ ಲಿಂಗಾಯತರನ್ನ ಪ್ರತಿನಿಧಿಸ್ತಾನಾ? ಹಿಂದು ನಾವೆಲ್ಲಾ ಒಂದು ಅಂತ ಹೇಳಾಂವ ತನ್ನ ಜಾತಿಗಿ ಮೀಸಲಾತಿ ಕೇಳೋದು, ದ್ವಂದ್ವ ಅಲ್ಲವಾ? ಎನ್ನ ಕರಸ್ಥಳಕ್ಕೆ ಬಂದು ಚುಳಾಕದಿರಯ್ಯ ಅಂದ ಅಣ್ಣನ ತತ್ವ ಪ್ರಚಾರ ಮಾಡತೀನಿ ಅಂತ ಹೇಳಿ, ಜಾತ್ರ್ಯಾಗ ತಿರಗಾಡಿ ರೀಲ್ಸ ಮಾಡೂದು ತಪ್ಪಲ್ಲವೆ? ಲಿಂಗಾಯತ ಅಂದರೆ ತತ್ವ! ಅದು ಜಾತೀಯ, ಮತ್ತು ಅಸ್ಪುರ್ಶತೆಯನ್ನ ಮೆಟ್ಟಿ ನಿಂತ ತತ್ವ, ಜಡತ್ವದಿಂದ ಚಿಂತನಶಿಲತೆಯೆಡೆಗೆ ಕರೆದುಕೊಂಡು ಹೋಗುವ ಮಾರ್ಗ! ಸೋಹಂ ನಿಂದ ದಾಸೋಹಕ್ಕ ಬಂದು ನಿಲ್ಲಿಸಿದ ಕಸುವ! ಲಿಂಗಾಯತ ಎಂದರೆ, ಉಪದೇಶ, ಸಂಸ್ಕೃತಿ ಮತ್ತ ಪ್ರವಾದಿ ಅನ್ನುವ ಕಾಲ್ಪನಿಕ ವ್ಯವಸ್ಥೆಯನ್ನ ನಿರಾಕರಿಸಿ, ಅನುಭಾವ, ಸಂವಾದ ಮತ್ತು ಸಾಮೂಹಿಕ ನಾಯಕತ್ವ ಕಟ್ಟಿದ/ವು ಪ್ರಜಾಸತ್ಮಾಕ ವ್ಯವಸ್ಥೆ. ಲಿಂಗಾಯತ ಅಂದರೆ, ಮೌಲ್ಯಗಳನ್ನ ಕಲ್ಲಾಗಿಸಿದ್ದಲ್ಲ, ಮನ್ವಂತರಕ್ಕೆ ಎಡೆ ಮಾಡಿದ ಸಾಧನ (tool). ಲಿಂಗಾಯತ ಅಂದರೆ, ಬಿತ್ತಿದ ಭಯವನ್ನ , ಕಿತ್ತಿ ಎಸೆಯುವ ಗಣಾಚಾರ! ಲಿಂಗಾಯತ ಅಂದರೆ, ಒಳಗೆ ಸುಳಿಯುವ ಆತ್ಮ ಹೆಣ್ಣು ಅಲ್ಲ ಗಂಡ ಅಲ್ಲ, ಅಂತ ಅನ...