ಪ್ರವಾದಿ ಮಹಮ್ಮದ ಪೈಗಂಬರ
ಪ್ರವಾದಿ ಮಹಮ್ಮದ ಪೈಗಂಬರ ಅವರನ್ನ ನಾನು ಹೀಗೆ ನೆನೆಯುತ್ತೆನೆ. ದೈವೀಕ ಭಾವನೆಯನ್ನ ಐಕ್ಯತೆಗೊಳಿಸಿ ದೇವನೊಬ್ಬನೆ ಅನ್ನುವ ತತ್ವ ಪ್ರತಿಪಾದಿಸಿ, ಸಾಮೂಹಿಕ ಪ್ರಾರ್ಥನಾ (ನಮಾಜ) ವ್ಯವಸ್ಥೆ ಮಾನವೀಯ ಎತ್ತಿ ಹಿಡಿಯುವ ಆಚರಣೆ, ಬಡವ, ಬಲ್ಲಿದ, ಶ್ರೀಮಂತರ ಎಲ್ಲರೂ ಸಾಲಾಗಿ ನಿಂತು ಸೃಷ್ಟಿಕರ್ತ ದೇವನೆಡೆಗೆ ಮನ ಅರ್ಪೀಸುವ ಭಾವ! ಸ್ಪೂರ್ಥಿಯ ಆಚರಣೆ. ಜಕಾತ್ - ಸಮುದಾಯಕ್ಕ ನೀಡುವ ಕಾಣಿಕೆ (ದಾಸೋಹ ಭಾವ). ಅಲ್ಹಮದು ಅಲ್ಹಾ - ಎಲ್ಲಾ ದೇವರಿಂದ. ಇನ್ಶಾಲ್ಲಹ - ದೇವರ ಇಚ್ಛೆ . ಇಂತಹ ಯುಕ್ತಿಗಳು, ಮನುಷರನ್ನ ಶರಣರನ್ನಾಗೀಸುವ ಪ್ರಕ್ರಿಯೆ. ಹೆಣ್ಣು ಮಕ್ಕಳಿಗೆ ಸಮಾನತೆ ಪ್ರತಿಪಾದಿಸಿದ ಪ್ರವಾದಿಗಳು, ಇಸ್ಲಾಮ ಧರ್ಮದಲ್ಲಿ ವರದಕ್ಷಿಣೆ ನಿಷಿದ್ಧ…ಹೆಣ್ಣು ಮದುವೆ ಆಗುವ ವರನನ್ನ ಪ್ರಶ್ನೆ ಕೇಳುವ ವ್ಯವಸ್ಥೆ ಕೂಡಾ ಇದೆ ( ಇದು ನನಗೆ ಹೇಳಿದ್ದು ಇರಾನೀನ ಗೆಳತಿ), ಆದರೆ ಭಾರತದಲ್ಲಿ ಜಾತೀಯ ಭಾವ ಈ ಧರ್ಮದ ಆಚರಣೆಯಲ್ಲಿ ತುಂಬಿ ಆಗಿದೆ. ಪ್ರವಾದಿಗಳು ಶಿಕ್ಷಣ ಕೊಟ್ಟವರು, ಬರಿ ಧಾರ್ಮೀಕ ಶಿಕ್ಷಣಕ್ಕೆ ಅಷ್ಟೆ ಅಲ್ಲ, ಆದರೆ ಅಲ್ಲಿ ಕೂಡಾ ಪುರೋಹಿತ ಶಾಹಿ ತುಂಬಿದೆ. ಇಸ್ಲಾಮ ಓದಿದವರಿಗೆ, ಲಿಂಗಾಯತ ಧರ್ಮ ತಿಳಿಯುವದು ಸರಳ, ಹಾಗಾಗಿ ಬಸವಣ್ಣನ ನಾಡಿನಲ್ಲಿ, ವಚನ ಸಾಹಿತ್ಯ ಅಥವಾ ಲಿಂಗಾಯತ ಧರ್ಮದ ಮೇಲೆ ದಾಳಿ ಆಗಿಲ್ಲ ಅನ್ನುವ ಐತಿಹ್ಯ ಅಲ್ಲಗಳೆಯಲು ಸಾದ್ಯವಿಲ್ಲ (ಅಲ್ ಅಮೀನ ಮೇಡಿಕಲ್ ಕಾಲೇಜ ವೈದ್ಯರು, ವಿದ್ವಾಂಸರು ಹೇಳಿದ್ದು). ಇಸ್ಲಾಮನಲ್ಲಿ ದೇವರನ್...