ಬಸವ ಆಶಯ, ಭಿಮೋತ್ಸಾಹ.

ಮಗ ಮಲಗಿದ, ಈಗ ಟೈಮ್ ರಾತ್ರಿ ೯:೪೫. ಅವನಿಗೆ ಗೊತ್ತಿದೆ, ಅವ್ವ ಅನ್ನೊ ಶಕ್ತಿ ಹತ್ತಿರದಲ್ಲಿದೆ, ನಾಳೆ ಎದ್ದು ಮತ್ತೆ ಅಪ್ಪನ ಜೊತೆ ೧,೨....೧೦ ತನ್ ಅಂಕಿ ಎನಸ್ತಿನಿ ಅನ್ನೋ ಭರವಸೆ ನು ಇದೆ, ಮಲಗ ಬೇಕಾದ್ರೆ ತೋದಲ್ ನುಡಿಯಲ್ಲಿ ೩ ಭಾಷೆ ಮಾತಾಡಿ ಮಲಗಿದ, ಹಂಗೇ ಟಿವಿ ಸ್ಕ್ರೀನ್ ಮೇಲೆ ತನಗೆ ಇಷ್ಟವಾದ ಹಾಡ ಕೇಳಿ ಆನಂದಿಸಿ, ಕುಣಿದು ಕುಪ್ಪಳಿಸಿ, ಅವ್ವ ಅಪ್ಪಗ ಮುದ್ದು ಮಾಡಿ ಮಲಗಿದ. ಎಂತಹ ಪ್ರಕೃತಿ ಸಹಜ ಬದುಕು ಮಗನೇ? ಕಲಿಯುವ, ಆನಂದಿಸುವ ಮತ್ತ ಮುದ್ದು ಮಾಡುವ ಗುಣ ಕಲಿತಿದ್ದು ಮಗ ೨೦೨೧ರಾಗ, ಲೋಕದಲ್ಲಿ ರೋಗ ತಾಂಡವ ಆಡಿದರು, ಅವ್ವ ಅಪ್ಪನ ಲೋಕದಲ್ಲಿ ತಲ್ಲೀನನಾದ ಮಗ ಪಡೆದಿದ್ದೆ ಹೆಚ್ಚು, ಕಳೆದಿದ್ದು ಬರಿ ಸಮಯ, ನೋಡಿದ್ದು ಕತ್ತಲು, ಬೆಳಕಿನ ಆಟ ಈ ನಡುವೆ ತಾಯಿ ಅವನ ಸರ್ವಸ್ವ, ಅಪ್ಪ ಯಾವದೋ ಒಂದು ಪ್ರೀತಿಯ ಪಾತ್ರ ಅಷ್ಟೇ, ಹಾಗೆ ಅಪ್ಪನ ಗಮನ ಸೆಳೆಯಲು, ಗೋಡೆಯ ಮೇಲಿನ, ಟಿವಿಯಲ್ಲಿ ಬರುವ ಬಾಬಾಸಾಹೇಬರ ಚಿತ್ರದ ಕಡೆ ಬೆರಳು ತೋರಿಸಿ, ಬಾಬಾ ಅಂದಾಗ ಅಪ್ಪ ಪುಳಕಿತನಾಗಿ, ಕರಗಿ, ಮಗನ ಎತ್ತಿ ಎದೆ ಅವಚಿಕೊಂಡು, ಜೆನ ಮುದ್ದೂ ಗರೆದು, ಕೂಸೆ ಅಂದಾಗ ಕಿಲ, ಕಿಲ ನಗುವ ಮಗ, ನನ್ನ ವಾಸ್ತವ. ಇದೆಲ್ಲಾ ಘಟಿಸಿದ್ದು ೨೦೨೧ ರಾಗ, ಒಂದು ಸಣ್ಣ ಪ್ರತಿಜ್ಞೆ ಮಾಡಿದ್ದೆ ಮಗನಿಗೆ, ೨೨ ವರ್ಷ ಕಲಿತ ಒಂದು ಅಭ್ಯಾಸ ಹಾಗೆಯೇ ಚಿವಟಿ ಹಾಕಿದೆ ಇದೆ ವರ್ಷದಲ್ಲಿ! ಹಕ್ಕಿಗಳ ಹಾರಾಡಿ, ಸಣ್ಣ ಸಣ್ಣ ಹುಲ್ಲು ಕಡ್ಡಿ ತಂದು, ಗೂಡು ಕಟ್ಟುವ ಹಾಗೆ, ಕಾಯಕ ಮಾಡಿ ಬಂದ ಮೌಲ್ಯವನ್ನು ಗೂಡು ಕಟ್ಟುವ, ಹಾಗೆ ಅಕ್ಕಪಕ್ಕದ ಗೂಡುಗಳಿಗೆ ಒಂದು ಹುಲ್ಲು ಕಡ್ಡಿ ದಾಸೋಹ ಮಾಡುವ ಗುಣ ಅಪ್ಪನೂ ಕಲಿತ ವರ್ಷ ೨೦೨೧. ೩೬೫ ದಿನಗಳಲ್ಲಿ ಪ್ರಾಮಾಣಿಕವಾಗೀ, ಜನರ ಆರೈಕೆ ಮಾಡಿ, ನನ್ನ ಆರೋಗ್ಯ ಸದೃಢವಾಗೀಟ್ಟಕೊಂಡ ವರ್ಷ, ೨೦೨೦ ರ ಕೆಲವು ಯೋಜನೆಗಳೂ ಕುಂಟುತ್ತಾ ಸಾಗಿದರು, ಮತ್ತೆ ಅವಕ್ಕೆ ಜೀವ ಮರಕುಳಿಸುವ ಪ್ರಯತ್ನ ಮಾಡತೀನಿ, ಹಾಗೆ ವೃಥಾ ವಾಗ್ವಾಗದಕ್ಕೆ ಇಳಿಯದೆ, ಹೇಳಬೇಕಾದ್ದನ್ನು ಹೇಳಿ, ಛಲಬೇಕು ಶರಣಂಗೆ, ಎನ್ನುವ ಗಣಾಚರ ಪಾಲನೆ ಮಾಡಿದ್ದೇನೆ. ೨೦೨೨ ರಲ್ಲು ಬಸವ ಆಶಯ ಮತ್ತು ಭಿಮೊತ್ಸಾಹ ಇರಲಿ ಎಂದು ಆಶಿಸುತ್ತಾ, ತಮಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು 🎉💐 ಹರಿಯು ಮನಕ್ಕೆ, ಕಾಲದ ತೆಕ್ಕೆಯಲ್ಲಿ ಸುತ್ತಿಡುವದ್ಯಾಕೆ? ಹಳೆಯದು, ಹೊಸದು ಯಾವುದು? ನಿನ್ನೆಯಲ್ಲಿ ನಾನಿಲ್ಲವೆ? ನಾಳೆಯಲ್ಲಿ ನಾನಿರುವದಿಲ್ಲವೆ? ಸಂಭ್ರಮಕ್ಕೆ, ಸಂತೋಷಕ್ಕೆ ಹೊತ್ತಿನ ಹಂಗಿರಬೇಕೆ? ಹೊಸತನದ ಬೆಳಗಿನ ಕಾತುರದಲ್ಲಿ, ಹಳೆತನ ಕಾಲಗರ್ಭದಲ್ಲಿ ನೆನಪಾಗಿ ಲೀನವಾಗುವ ಮುನ್ನ, ನಿನ್ನ ಸಮ್ಮೊಹಕ ಧ್ವನಿ, ನಿಶ್ಕಲ್ಮಷ ನಗು ಹಾಗೆ ಇರಲಿ ನಿತ್ಯ ನಿರಂತರ! #ಮಂಜುಶ್ರೀಪಾಟೀಲ್ #Welcom

Comments

Popular posts from this blog

The Eternal Bridge: From the 12th-Century Vachana Movement to Global Social Justice

The Deccan Cross: A Unified Vision for Karnataka's Economic Future

ಜಗತ್ತಿಗೊಂದು ಶಾಂತಿ ಮಂತ್ರ: ಕುವೆಂಪು-ಬಸವಣ್ಣನವರ ಹಾದಿ ನಮಗೆ ದಾರಿ