ಅಣ್ಣನ ಜಾತ್ರೆಯ ತೇರು ಆಗಿಸದೆ
ಒಬ್ಬ ನಾಯಕರಿಗೆ ಎಂತಹ ಪೂರಕ ವ್ಯವಸ್ತೆ ಇತ್ತು?
ಮನೆತನ, ಸಂಸ್ಥೆ ಮತ್ತು ಹಲುವು ಕಾಯಕ ಪಂಗಡಗಳ ಒಕ್ಕೂಟ ಎಲ್ಲಾ ಲಿಂಗಾಯತ ಧರ್ಮದ ತಳಹದಿಯಲ್ಲಿ ಸಿಕ್ಕ ಅವಕಾಶ, ಅನುಭಾವ ಮತ್ತ ಅಸ್ಮಿತೆ, ಆ ಎಲ್ಲವನ್ನು ಅಸ್ವಾದಿಸಿ “ಗೌಡ” ಎನ್ನುವ “ವ್ಯಕ್ತಿಗತ” ತತ್ವಕ್ಕ ಒಳಗಾಗಿ ಜಂಗಮ ದಾಸೋಹ ನಿರಾಕರಿಸಿದ್ದು ಆಶ್ಚರ್ಯ ಮತ್ತು “ಭಯದ ಬುತ್ತಿ” ತಿಂದರೊ ಅದಕ್ಕ ಕಸುವು ಕಳಕೊಂಡರೊ ಅನ್ನೊ ಸಹಾನುಭೂತಿ, ಹತ್ತಾರಾಗ ಹನ್ನೊಂದು ಆಗೋದೊ, ಹನ್ನೊಂದರೋಳಗ ನಾ ಭಿನ್ನ ಅನ್ನೊ ಅಸ್ಮಿತೆ ಎತ್ತಿ ಹಿಡಿಯೋದೊ ಅರಿಯದೆ ಹೋದರಾ?
ಲಿಂಗಾಯತ ಯಾರಿಗೆ ಬೇಕು ಅನ್ನೊ ಧೋರಣೆ ಲೆಕ್ಕ ಹಾಕೊ ಮಂದಿಗೆ ಗಣಿತಕ್ಕ ಹೊಳಿಯುವದಂತದ್ದಲ್ಲ ಲಿಂಗಾಯತ ತತ್ವ,
ಇದು ಎದೆಯ ದನಿ, ದಮನಿತರ ಸಂಜೀವಿನಿ, ಜಾತೀಯ ದ್ವೇಷಕ್ಕ ಸಿಕ್ಕ ಔಷದಿ! ಇದು ದೇವರಿಗೆ ಕನ್ನಡ ಕಲಿಸಿದ ಅಕ್ಷರ ಕ್ರಾಂತಿ, ಅಂಗೈಯೋಳು ಲಿಂಗ ಕೆೊಟ್ಟ ತತ್ವದ ಧಾರ್ಮೀಕ ಕ್ರಾಂತಿ, ಮಾದಾರ ಚೆನ್ಯಯ್ಯನ ಮಗನೆಂದ ಸಮಾಜೀಕ ಕ್ರಾಂತಿ, ಎಲ್ಲರಲ್ಲು ಇರುವ ಆತ್ಮ ಹೆಣ್ಣು ಅಲ್ಲ ಗಂಡು ಅಲ್ಲ ಅಂದ ಸಮಾನತೇಯ ಕ್ರಾಂತಿ, ಅಂದಿನ ಅನ್ನ ಅಷ್ಟ ಸಾಕೆಂದ ದಾಸೋಹದ ಕ್ರಾಂತಿ, ತತ್ವನ್ನ ಅರುಹಿಬಂದವರ ಎದೆಗಪ್ಪಿ ಸಲುಹಿದ ದೊಡ್ಡತನದ ಕ್ರಾಂತಿ, ಈ ಕ್ರಾಂತಿ ಹಾಡು ನಾವು ನಿತ್ಯ ಹಾಡೋಣ, ಮತ್ತೆ ಕಲ್ಯಾಣ ಕಟ್ಟೋಣ, ಮನದ ಮಡುವಿನಲ್ಲಿ ಹುದುಗಿದ ಜಾತೀಯತೆ ಅಳೇಯೊಣ ಬಸವ ಭೀಮರ ಕನಸು ನನಸಾಗಿಸೋಣ!
ಜಾಗತೀಕ ಲಿಂಗಾಯತ ಮಹಾಸಭಾದ ಮನ್ವಂತರ, ಗಟ್ಟಿತನ ದಿನದಿಂದ ದಿನಕ್ಕ ಹೆಚ್ಚಾಗುತಿದೆ, ಸಂಸತ್ತನಲ್ಲಿ ಕೂಡಾ ನಮ್ಮ ಅಸ್ಮಿತೇಯ, ತತ್ವದ ಧ್ವನಿ ಮೊಳಗತಾ ಇದೆ, ವಚನ ಸಾಹಿತ್ಯ ವ್ಯಾಪಕವಾಗಿ ಮುಟ್ಟತಾ ಇದೆ,
Comments
Post a Comment