ಮಾನನೀಯ ಮುಖ್ಯಮಂತ್ರಿಗಳಿಗೆ ಅಂತರಂಗದ ಪತ್ರ!
ಮಾನನೀಯ ಮುಖ್ಯಮಂತ್ರಿ ಶರಣ ಸಿದ್ದರಾಮಯ್ಯನವರ ಮತ್ತು ಮಾನನೀಯ ಶಿಕ್ಷಣ ಸಚಿವರ ಗಮನಕ್ಕೆ,
ಬಹಿರಂಗ ಒತ್ತಾಸೆ.
ಹಿರಿಯರೆ, ಮತ್ತು ಬಸವಾನುಯಾಯಿಗಳು ಪ್ರಜಾಸತ್ಮಕ ಒಲುವು ಇರುವ ನಿಮಗೆ ಒಬ್ಬ ಕನ್ನಡಿಗನ ಸವಿಹಾರೈಕೆ ಮತ್ತು ನಿವೇದನೆ,
ಶರಣರೆ ನಾನು “ಕನ್ನಡ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಕೊಂಡಗೂಳಿಯ ೧೯೮೭-೧೯೯೫ ರ ವಿಧ್ಯಾರ್ಥಿ, ಈ ಶಾಲೆಗೆ ನಾನು ಉತ್ತರದಲ್ಲಿ ಉದಯಿಸಿದ ಸೂರ್ಯ ಅಂತೀನಿ (ಕವನ ಲಗತ್ತಿಸಲಾಗಿದೆ - ಸೊಲಗಿ ಹಿಟ್ಟ ಚೆರಗಿ ಮಜ್ಜಗಿ).
ನಾನು ಮತ್ತ ನನ್ನ ಸಹಪಾಠಿಗಳು ಬಡತನ ಮತ್ತು ಅಸ್ಪೂರ್ಷತೆ ಅರಿವು ಇರಲಾರದೆ, ಶಿಕ್ಷಣವೆ ನಾವಿರುವ ಪರಸ್ಥಿತಿಯಿಂದ ಹೊರತರುವ ಸಾಧನ ಅಂತ ನಂಬಿದ ಸಾಮನ್ಯ ಕೊಂಡಗೂಳಿಯವರ ಮಕ್ಕಳು! ಅದು ವಾಸ್ತವದಲ್ಲಿ (೨೦೨೩ರಲ್ಲಿ) ಸತ್ಯ!
ಏಳು ಮಂದಿಯ ಉಧಾಹರಣೆ ಕೊಟ್ಟು ನಿರೂಪಿಸ್ತಿನಿ, ಮೊದಲಯನೆವಾಗಿ ನಾನು ಈಗ ನರ್ಸಿಂಗ ಕಾಯಕದಲ್ಲಿ ನಿರತವಾಗಿರುವ ಇಂಗ್ಲೆಂಡಿನಲ್ಲಿರುವ ಮೊದಲ ಕೊಂಡಗೂಳಿಯಂವ, ನಂತರ ಇನ್ನೊಬ್ಬ ಸಹಪಾಠಿ ಕೃಷಿ ಇಲಾಖೆಯಲ್ಲಿ, ತಾಲುಕಾ ಅಧಿಕಾರಿ, ಮತ್ತೊಬ್ಬ ಪೋಲಿಸ ಇಲಾಖೆಯಲ್ಲಿ ASI, ಇನ್ನೊಬ್ಬ ಹಿಂದಿ ನುಡಿಯ ಶಿಕ್ಷಕ, ಮಗದೋಬ್ಬ PhD (ಮಾಡಿದಾನೆ ಅಂತ ಕೇಳಿನಿ ಸ್ಪಷ್ಟೆತೆ ಇಲ್ಲ ಅದನ್ನ ಮಾಹಿತಿ ಸಿಕ್ಕಾಗ ಹಂಚಿಕೊಳ್ಳುವೆ) ಒಬ್ಬ ರಾಜ್ಯ ಸಾರಿಗೆಯ ಸೇವೆಯಲ್ಲಿ, ಒಬ್ಬ ವ್ಯಾಪಾರಿ (ಶಾಲೆಯಲ್ಲಿ ಸ್ಥಾಪಿಸಿದ ಸಹಕಾರ ಸಂಸ್ಥೆಯ ಅನುಭವ ಇದ್ದಂವ), ಒಬ್ಬ ತೀರಿದ, ಒಬ್ಬ ಖಾಸಗಿ ವ್ಯವಹಾರದಲ್ಲಿ ಕಷ್ಟ ಅನುಭವಿಸಿದ (ಸರಕಾರಿ ಯೋಜನೆ ನಂಬಿ), ಇನ್ನೊಬ್ಬ ಭೂಮಿ ಒಡೆತನ ಇರದೆ ಇದ್ದರು ಕೃಷಿಯಲ್ಲಿ ನಿರತ, ಒಬ್ಬ ಭೂ ಒಡೆತನ ಇದ್ದು ಕೃಷಿಕ. ದುರಾದೃಷ್ಟ ಅಂದರೆ ನಮ್ಮ ಜೊತೆ ಕಲಿತ ಹೆಣ್ಣಮಕ್ಕಳ ಬಗ್ಗೆ ವಿಸ್ತೃತ ಮಾಹಿತಿ ಇಲ್ಲ ಆದರೂ ಒಬ್ಬ ಸಹಪಾಠಿ ಮಗ ಈಗ ವೈದ್ಯಕೀಯ ಶಿಕ್ಷಣ ಪಡಿತಾ ಇದ್ದಾನೆ.
ಇಷ್ಟೆಲ್ಲಾ ಸಾದ್ಯವಾಗಿದ್ದು ಒಬ್ಬ ಗುರುವಿನಿಂದ!
ಅವರ ಹೆಸರೆ - ಅಶೋಕ ಶರಣಪ್ಪ ಭೀಮನಗರ!
ಆಹರ, ಅಸ್ಪೂರ್ಷತೆ, ಬಡತನ ಮೆಟ್ಟಿನಿಂತ ಅರಿವುವಿನ ವ್ಯಾಪ್ತಿ ವಿಸ್ತಾರಗೊಳಿಸಿದ ಭತಗುಣಕಿಯ ಭೀಮ, ನಮ್ಮ ಜೀವನದಲ್ಲಿ ಬೆಳಕು ಚೆಲ್ಲಿದ (ಗುರುವೆ ಮರೆಯಲಾರೆ ನಿಮ್ಮ ಉಪಕಾರವನು - ಕವನ ಲಗತ್ತಿಸಲಾಗಿದೆ) ಅಂತಹ ಸರಕಾರಿ ಶಿಕ್ಷಕ, ಬರಹಗಾರ, ಸಂಗೀತಗಾರ, ಸಮತಾವಾದಿ, ಎಲ್ಲದಕಿನ್ನ ಮಿಗಿಲಾಗಿ ಅರಿವುವನ್ನ ವಿಸ್ತಾರಗೊಳಿಸಿದ ಗುರು.
ನನ್ನ ಗುರುವಿಗೆ, ಮೊದಲಿಗೆ ಅರಣ್ಯ ಇಲಾಖೆಯಲ್ಲಿ ನೌಕರಿ ಸಿಕ್ಕಿತ್ತು, ಅದನ್ನ ಐದಾರು ತಿಂಗಳ ಸಿಕ್ಕ ಮ್ಯಾಲ, ಶಿಕ್ಷಣದ ಕಾಯಕ ಸಿಕ್ಕತರಿ,
ಅವರಿಗೆ ಮೊದಲನೆ ಪಗಾರ ಸಿಕ್ಕಾಗ ಅದೆ ಪಗಾರನ್ಯಾಗ ಮೂರು (ಆಂಗ್ಲ, ಕನ್ನಡ ಮತ್ತ ಹಿಂದಿ) ಡಿಕ್ಸನರಿ ತಂದರಿ, ನಮ್ಮ ಕೊಂಡಗೂಳಿಯೊಳಗ ವಸ್ತಿ ವಗದು ಸ್ಟೊದ ಮ್ಯಾಲ ಅಡುಗಿ ಮಾಡಕೊಂಡು, ಸೊಲಾಪೂರ ಮುದ್ದೆಬಿಹಾಳ ಸಾರಿಗೆ ಬಸ್ಸನ್ಯಾಗ ಬುತ್ತಿ ತರಸಕೊಂಡು ನಮಗ ಅಕ್ಷರ ಜ್ಞಾನ ಮೂಡಿಸದರಿ! ಅವರೆಂದು ಧರ್ಮ ಮತ್ತು ಜಾತೀಯ ರಾಜಕಾರಣದ “ಕೈ ಗೊಂಬೆ” ಆಗಲಿಲ್ಲ ರಿ, ಅವರ ಸರ್ವಿಸ ಬುಕ್ಕಲ್ಲಿ ಒಂದೆ ಒಂದು ಕಪ್ಪು ಚುಕ್ಕೆ ಇಲ್ಲ ಈಗ ಅವರು ನಿವೃತ್ತರು. ಅವರಿಗೆ ಅನೇಕ ವಿಧ್ಯಾರ್ಥಿಗಳು ಸನ್ಮಾನ ಮಾಡಿ ಹಾಡಿ ಹೊಗಳಿದ್ದಾರೆ.
ಈ ತರಹ ನಮ್ಮ ಸುತ್ತ ಮುತ್ತ ನಡೆದ ಘಟನೆಗಳು ಇದಾವೆ ನಮ್ಮಣ್ಣನ ಜೀವನದಲ್ಲಿ ಪ್ರಭಾವ ಬೀರಿದವರು ಮಾಸ್ಟರ ಆನಂದ ಪಾತ್ರೆ, ಮಡಿವಾಳಪ್ಪ ಹೆಬ್ಬಾಳ ಹಾಗೆ.
ಈಗ ಶಿಕ್ಷಣವನ್ನ ಹದಗೆಡಿಸ್ತಾ ಇದಾರೆ ಚಿತ್ಪವಾನ ಬ್ರಾಹ್ಮಣರ ಜಾತಿ ಸಂಘದಿಂದ “ರಾಷ್ಟ್ರೀಯತೆ” ಸೊಂಗಿನಡಿಯಲ್ಲಿ, ಮಾಧ್ಯಮೀಕ ಶಿಕ್ಷಕರ ಸಂಘ ಅಂತ ಕಟಕೊಂಡು, ಒಬ್ಬ ಕನ್ನಡಿಗ, ಕನ್ನಡ ಮಾಸ್ತರನು “ಜೀ” ಅಂತ ಸಂಭೋದಿಸುವ ಹಾಗೆ, ಇವರು ಅನಾಹೂತ ಮಾನಸಿಕ ಭಯೋತ್ಪಾದಕರು! ಇವರು ಹ್ಯಾಂಗ ಅಂದರಿ, ನಮ್ಮ ನಿಜ ಶರಣ ಅಂಬೀಗರ ಚೌಡಯ್ಯ ಹೇಳುವು ಹಾಗೆ “ಕಟ್ಟಿದ ಲಿಂಗವ ಬಿಟ್ಟು, ಬೆಟ್ಟಾದ ಲಿಂಗಕ್ಕೆ ಹೋಗಿ ಅಡಿ ಮೇಲಾಗಿ ಬಿಳುವರು” ( ಸಂದರ್ಭ ಏನ ಅಂದರೆ ಸಂವಿಧಾನ ಬಿಟ್ಟು ಬೆರೇನು ನಂಬುವರು) ಅದಕ್ಕ ಈ ನೊಂದಾಯಿತ ಅಲ್ಲದ ಸಂಘ ಹೇಗೆ ಸರಕಾರಿ ಸೇವೆ ನಿರತರ ಬ್ರೇನ ವಾಷ ಮಾಡುತ್ತೆ? ಅದನ್ನ ಪ್ರಜೆಗಳಿಂದ ಚುನಾಯಿತ ಸರಕಾರ ಇದನ್ನ ನಿಗ್ರಹಿಸಬೇಕು, ಯಾವುದೆ ಭಿಡೆಗೆ ಒಳಗಾಗದೆ,
ರಾಷ್ಟ್ರೀಯ ಶಿಕ್ಷಣ ನೀತಿ (NEP) ಕರ್ನಾಟಕ ಕಾಂಗ್ರೆಸ್ ಪಕ್ಷದ ಅದ್ಯಕ್ಷರು ಹೇಳಿದ ಹಾಗೆ ಅದು ನಾಗಪೂರ ಎಜುಕೇಶನ ಪಾಲಸಿ ಅದನ್ನ ಕರ್ನಾಟಕ ಎಜುಕೇಷನ ಪಾಲಸಿ ಆಗಿ ಮಾಡಿ ಸರಕಾರಿ ಶಿಕ್ಷಕರನ್ನ “ಮಾಧ್ಯಮಿಕ ಸಂಘದ” (ಜಾತೀಯ ಸಂಘದ) ಪದಾಧಿಕಾರಿಗಳು ಆಗದಂತೆ ನಿರ್ವಹಿಸಿ.
ನಾವು ಮುನ್ನಡೆಯಬೇಕಾದರೆ “ನಾಗಪೂರ ಜಾತೀಯ ತತ್ವ” ನಿರಾಕರಿಸಬೇಕು, ಹಾಗಾಗಿ ರಾಜ್ಯ/ರಾಷ್ಟ್ರ ಮಾಧ್ಯಮಿಕರ ಸಂಘ ಬಂದ ಮಾಡಿ!
ಘನವೆತ್ತ ಸರಕಾರಕ್ಕ ನಾನು ಆಜ್ಞೆ ಮಾಡಲಾರೆ ಆದರೆ ನನ್ನ ಅಂತರಂಗದ ಮಾತು ನಿಮಗೆ ಹೇಳಿರುವೆ.. ಕೇಳದೆ ಹೋದರೆ ಡಿಲೀಟ ಮಾಡಿ, ಮನ ಮುಟ್ಟಿದರೆ ನಿರ್ಣಯ ತೆಗೆದುಕೊಳ್ಳಿ.
ಜೈ ಬಸವ ಜೈ ಭೀಮ!
ಇವ ನಿಮ್ಮಂವ,
ಬಸವ ಕೊಂಡಗೂಳಿಯಂವ
Comments
Post a Comment