ನಾ ಯಾಕ ಬುದ್ಧನ ಓದಲಿಲ್ಲ?

ಬುದ್ಧ ಅಕ್ಷರಗಳಲ್ಲಿ ಹುದಗಿದ್ದನಾ? ಇಲ್ಲ, ಇಲ್ಲೆ ನಮ್ಮ ಮನೆಗಳಲ್ಲಿ “ಶಾಂತ ಮೂರುತಿ”ಯಾಗಿ, ಹಳದಿ ಅರಬಿ ತೊಟಕೊಂಡು, ಗುಂಗುರಗೂದಲ ಇಟಕೊಂಡು, ಕಣ್ಣ ಮುಚ್ಟಿ ತಪ ಮಾಡುವ ಶಿಲೆಯಾಗಿ, ಸ್ತಬ್ಧವಾಗಿ ಬಿಟ್ಟನಾ? 

 ಅರಿವಿನ ವ್ಯಾಪ್ತಿ ವಿಸ್ತಾರ ಮಾಡಲು ಹೊರಟಂವ, ಸಾವಿಲ್ಲದ ಮನಿಯ ಸಾಸಿವೆ ಕಾಳ ತಗೊಂಡು ಬಾ ತಾಯಿ ಅಂದನಲ್ಲ? ಸಾವಿನ ಹೆದರಿಕೆ ಕಳೆಯಬೇಕೆಂಬ ಗುರಿಯಯಿತ್ತೆ? ಬುದ್ಧ ಜನಮಾನಸಸದಲ್ಲಿ, ಕಳಿದಿದ್ದೆಷ್ಟು? ಕೂಡಿಸಸಿದ್ದೆಷ್ಟು? ಈ ಗಣಿತದ ಮ್ಯಾಲ ನಾವು ಲೆಕ್ಕ ಹಾಕಿದರ, ಸಾವು ನೋವಿನ ಕಾರಣಗಳನ್ನೆ ನಮಗ ತಿಳಿಸಿದ ಮಾರ್ಗದರ್ಶಕನಾಗಿ, ತಾನು ನಡೆದು ಹೋದನೆ? 

 ಇಲ್ಲಾ ಬುದ್ಧ ನಮ್ಮೊಳಗೆ ಮಿಳಿತವಾಗಿ, ಸಮ ಸಮಾಜಕ್ಕ ಹಾತೊರೆಯುವ ಮನಗಳಿಗೆ, ಸುಪ್ತ ಮನಸ್ಸಿನಲ್ಲಿ ಸ್ಥೂಪವಾಗಿ ನೆಲೆಯೂರಿದನೆ? ನೆಲೆ ಉರುವ ಮನಸ್ತಿಥಿಯಯವನೆ? ಅಂತರಾಳದ ನದಿಯಾಗಿ ಹರಿಯುವವನನೆ? ಈ ಎಲ್ಲ ಪ್ರಶ್ನೆಗಳು, ಅರಿವಿನ ವ್ಯಾಪ್ತಿ ವಿಸ್ತಾರಗೊಳಸಲಕ್ಕ, ಹೆಂಟಿ ಹೊಡದು, ಹೊಲವನ್ನ ಹದಗೊಳಿಸುವ ಪ್ರಯತ್ನ. ಈಗ ನನಗ ಯಾಕ ಬುದ್ಧನ ಒದಲಕ್ಕ ಯಾಕಾಗಲಿಲ್ಲ ಅನ್ನುವ ಪ್ರಶ್ನೆಯ ಉತ್ತರಗಳ ಹುಡಕಾಟದಲ್ಲಿ, ನನ್ನೊಳಗೆ ಬುದ್ಧ ನಿತ್ಯ ಹರಿಯುವ ನದಿಯೆ? ಅನ್ನುವ ಧನ್ಯದ ಭಾವ ಮೂಡಲಾರದೆ ಇಲ್ಲ, ಅದನ್ನ ಕಡಿಕ್ಕ ಹೇಳತಿನಿ. 

 ಹುಟ್ಟಿದ್ದು ಕಲಬುರಗಿಯಲ್ಲಿ, ಬೆಳೆದಿದ್ದು ಬಿಜಾಪೂರ, ಮಂಗಳೂರ ಮತ್ತು ಬೆಂಗಳೂರ ಜಿಲ್ಲೆಗಳಲ್ಲಿ, ಒದಿದ್ದು, ಕನ್ನಡ ಮಾದ್ಯಮದಲ್ಲಿ, ಇಂಜನೀಯರಿಂಗ (ಅಪೂರ್ಣ) ಮತ್ತು ನರ್ಸಿಂಗ ಅಧ್ಯಯನ ಮಾಡಿದ್ದು, ಹಿಗಾಗಿ ಬುದ್ಧನ ವಿಷಯ ಹತ್ತಿರ ಸುಳಿಯಲೆ ಇಲ್ಲ, ಇನ್ನ ಊರಾಗ, ಮಡಿವಾಳಪ್ಪ, ಮೌಲಾಲಿ, ದುರ್ಗವ್ವ, ದ್ಯಾಮವ್ವ ಮತ್ತ ಹಣಮಂತ ದೇವರಾಗಿ “ಕ್ಷೇತ್ರಾಧಿಪತಿ”ಗಳಾಗಿ, ಮೌಢ್ಯಗಳ ಹೇರಿಕೆ ಅವ್ಯಾಹತವಾಗಿ ನಡಿದಿತ್ತು, ನಡಿತಾ ಇದೆ, ಮೊದಲ ಸುಮ್ಮ ಅಲ್ಲೆ ಗುಡ್ಯಾಗ ಭಜನ ನಡಿತಾ ಇತ್ತು ಈಗ ಲೌಡಸ್ಪೀಕರ್ ಹಚ್ಚಿ ನಡಿತಾದ. 

 ಹೈಸ್ಕೂಲನ್ಯಾಗ ಕೆಲವಂದೂ ಪುಸ್ತಕಗಳಲ್ಲಿ ಬುದ್ಧ ಇಣಕಿದ್ದ, ಸುತ್ತಮುತ್ತ ಇರೂ ಸ್ನೇಹಿತರು, ಬುದ್ಧ ಅಂದರ ದಲಿತರಂವ ಅನ್ನು ಅಂಬೋಣಗಳನ್ನ ಹಂಚತಿದ್ದರು, ಕಾಲೇಜನ್ಯಾಗ “ಎದ್ದೇಳು ಮಂಜನಾಥ್...” ಅನ್ನುವ ವಾತಾವರಣ. 

 ಹೊರದೇಶಗಳಲ್ಲಿ, ಬಹುತೇಕ ಭಾರತೀಯ ಹೋಟೆಲಗಳಲ್ಲಿ, ಬುದ್ಧ ಸ್ವಾಗತಕಾರ. 

 ಸರಕಾರಗಳ ಆಡಳಿತದಲ್ಲಿ, ಬುದ್ಧ “ಉತ್ಸವ”ದ ಮೂರುತಿ ಆದ ಆದರ ಅವನ ವಿಚಾರಗಳ ಅನುಷ್ಟಾನ ಆಗಲಿಲ್ಲ, ರಾಜಕಾರಣದ ನಿಲುವಗಳಾಗಲಿಲ್ಲ, ಆದರೆ ಬುದ್ಧ ಹರಿತಾನೆ ಇದ್ದ, ದಮನಿತರಲ್ಲಿ, ಬುದ್ಧ ಬಸವ ಅಂಬೇಡ್ಕರ ವೇದಿಕೆಯಾಗಿ, ದಮನಿತರಲ್ಲಿ ಈಗಲೂ ಬುದ್ಧನೆ ಅಂತರಯಾಮಿ, ಮಾಯಾವಿ ಅಲ್ಲ ಅರಿವಿನ ಬೆಳಕಾಗಿ. 

 ಬರಿ ಇಲ್ಲಗಳ ಪಟ್ಟಿ ಮಾಡಿದರ, ನಾ ಯಾಕ ಓದಲಿಲ್ಲ ಅನ್ನುವ ಪ್ರಶ್ನೆಗೆ ಪರಿಪೂರ್ಣವಾದ ಉತ್ತರ ಸಿಗಲಿಕ್ಕಿಲ್ಲ, ಬಹಿರಂಗದ ಕಾರಣಗಳನ್ನ ಪಟ್ಟಿ ಮಾಡಿದ ಉದ್ದೇಶ, ಅಂತರಂಗದ ಇಚ್ಛೆಗೆ ಪೂರಕ ವ್ಯವಸ್ಥೆ ನಿರ್ಮಾಣವಾಗಲಿ ಅನ್ನುದು ಹೆಬ್ಬಯಕೆ ವಿನಃ ದೋಷಾರೋಪಣೆ ಅಲ್ಲ. 

 ಹೀಗೆ, ಬುದ್ಧನ ವಿಚಾರ ಅರಿತಾ ಹೋಗುವ ಪ್ರಯತ್ನ ಜಾರಿಯಲ್ಲಿದೆ... ಬುದ್ಧ, ನನ್ನ ಮನದಲ್ಸಿ ಹರಿಯುವ ನದಿ ಅಂತ ಕಡಿಗಿ ಹೇಳತೀನಿ ಅಂದಿದ್ದೆ ಅದಕ್ಕ ಸುಮಾರು ವರ್ಷಗಳ ಹಿಂದೆ, *ಧರೆಯ ಗರ್ಭದಲ್ಲಿ ಜನಿಸಿದ ವಿಚಾರ* ಅನ್ನುವ ಕವನ ನಿಮ್ಮ ಜೋತಿ ಹಂಚಕೊಂಡೀನೀ ಓದರಿ; 

 "ಧರೆಯ ಗರ್ಭದಲ್ಲಿ ಜನಿಸಿದ ವಿಚಾರ" 
 
ಹೊಲದಲ್ಲಿ ಬಿಜವೊಂದು ಬಿದ್ದಿದೆ, 
ಮುಗಿಲಲ್ಲಿ ಮೋಡಗಳ ಮಿಲನ, 
ಭಾವಗಳ ಹನಿಯೊಡೆದು ಧರೆಯ ಗರ್ಭ ತುಂಬಿದೆ. 

ಮೊಳಕೆ ಮಗುವಾಗಿ, 
ಲೌಕಿಕದ ಗಾಳಿ, ನೀರು, ಬೆಳಕು ಮತ್ತು ಮಣ್ಣು ತಾಗುವ ಮುನ್ನ, 
ಹೆತ್ತ ತಾಯಿಯ ಅಲೌಕಿಕ ಸಂಬಂಧದ ಅರ್ಥ ನಾ ಅರಿಯೆ. 

ನಾಮಕರಣ, ಧಾರ್ಮಿಕರಣ, ಜಾತಿಕರಣ, ಯಾವುದಕ್ಕೆ? 
ಜೀವನಿತ್ತ ಧಾತುವಿಗೋ? ಪೋಸಿಷಿದ ರಕ್ತಕ್ಕೋ? 
ಲೌಕಿಕ (ಜೀವಂತ) ಮೌಂಸ ಮುದ್ದೆಗೋ? 

ಯಾರು? "ನನ್ನ" ಮಾಲೀಕ. 
ಹೆಣ್ಣು-ಗಂಡಿನ ಮಿಲನವೇ? 
ಅಥವಾ, ಮಿಲನದ ಕಾಲವೇ? 
ಅಥವಾ, ಕಾಕತಾಳಿಯವೇ? 

ಯಾರೋ? ಯಾವದೋ ಕಾಲದಲ್ಲಿ, 
ಬರೆದಿಟ್ಟ ವಿಚಾರಗಳ ಆಧಾರದ ಮೇಲೆ "ನನ್ನ" 
ಶಾಸ್ತ್ರಿಕರಣಗೊಳಿಸಲು ಸಜ್ಜಾದ ವಾದಿಗಳೇ, 
ಯಾರು ಕೊಟ್ಟರು ನಿಮಗೆ, ಆ ಅಧಿಕಾರ! 

ಹೊಲದಲ್ಲಿ ಬಿಜವೊಂದು ಬಿದ್ದಿದೆ, 
ಮುಗಿಲಲ್ಲಿ ಮೋಡಗಳ ಮಿಲನ, 
ಭಾವಗಳ ಹನಿಯೊಡೆದು ಧರೆಯ ಗರ್ಭ ತುಂಬಿದೆ. 

 
ಬುದ್ಧಂ ಶರಣಂ ಗಚ್ಛಾಮಿ 
ಧಮ್ಮಂ ಶರಣಂ ಗಚ್ಛಾಮಿ 

 ಬರೆದವರು
ಬಸವ ಪಾಟೀಲ, ಕೊಂಡಗೂಳಿಯಂವ

Image Courtesy : timesnownews

Comments

  1. ಮಾನವೀಯತೆ ಮೌಲ್ಯಗಲನ್ನು ಎತ್ತಿ ಸಾರಿದ ಬುದ್ದ ಬಸವ ಅಂಬೇಡ್ಕರ್ ಅವರು ಈ ಕಾಲಘಟ್ಟದಲ್ಲಿ ಸರ್ವರಿಗೆ ತನು, ಮನ, ಪ್ರಾಣವಾಗಿ ಪರಿವರ್ತನೆ ಆಗಲೇ ಬೇಕಾಗಿದೆ‌. ಇಂಥ ಸುಂದರ ಬುದ್ಧನ ದರ್ಶನ ಮಾಡಿದ ಸಲುವಾಗಿ ನಿಮಗೆ ಅನಂತ ಅನಂತ ಶರಣು ಶರಣಾರ್ಥಿ.
    ಬುಧ್ಧಂ ಶರಣಂ ಗಛ್ಛಾಮಿ.
    ಬಸವಂ ಶರಣಂ ಗಛ್ಛಾಮಿ.
    ಸಂಛಂ ಶರಣಂ ಗಛ್ಛಾಮಿ.

    ಶರಣು ಶರಣಾರ್ಥಿ. 🙏🙏🙏

    ReplyDelete
    Replies
    1. ಶರಣು ಶರಣಾರ್ಥಿ ಸ್ವಾಮಿಯವರಿಗೆ, ದಯವಿಟ್ಟು ಕ್ಷಮಿಸಿ ನಿಮ್ಮ ಈ ಹಿಂಬರಹ ಓದಿರಲಿಲ್ಲ ಈಗ ಓದಿದೆ, ಖುಷಿ ಆಯಿತು ನಿಮ್ಮ ಅಭಿಪ್ರಾಯ ಕೇಳಿ

      Delete

Post a Comment

Popular posts from this blog

The Eternal Bridge: From the 12th-Century Vachana Movement to Global Social Justice

The Deccan Cross: A Unified Vision for Karnataka's Economic Future

ಜಗತ್ತಿಗೊಂದು ಶಾಂತಿ ಮಂತ್ರ: ಕುವೆಂಪು-ಬಸವಣ್ಣನವರ ಹಾದಿ ನಮಗೆ ದಾರಿ